ಕೆಯ್ಯೂರು: ಇಲ್ಲಿನ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ 3 ವರ್ಷಗಳ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೆಯ್ಯೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಜೂ. 20ರಂದು ಅಧಿಕಾರ ಹಸ್ತಾಂತರ ಮಾಡಲಾಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿದ್ದ ಎಸ್.ಬಿ. ಜಯರಾಮ ರೈ ಬಳಜ್ಜ, ಕೆಯ್ಯೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಕೆ.ಎಂ. ಅವರಿಗೆ ಲೆಕ್ಕ ಪುಸ್ತಕ ಮತ್ತು ಕೀ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸಂತೋಷ್ ಕುಮಾರ್ ರೈ ಇಳಾಂತಜೆ, ಜಯಂತ ಪೂಜಾರಿ ಕೆಂಗುಡೇಲು, ದಿನೇಶ ಕಾಪುತ್ತಡ್ಕ, ವೆಂಕಟರಮಣ ಗೌಡ ದೆರ್ಲ, ಕೆಯ್ಯೂರು ಗ್ರಾ.ಪಂ. ಕಾರ್ಯದರ್ಶಿ ಸುರೇಂದ್ರ ರೈ ಇಳಾಂತಜೆ, ಸದಸ್ಯ ಎ.ಕೆ. ಜಯರಾಮ ರೈ ಕೆಯ್ಯೂರು, ಉದ್ಯಮಿ ಸಹಜ್ ರೈ ಬಳಜ್ಜ, ಶರತ್ ಕುಮಾರ್ ಮಾಡಾವು, ವಿಶ್ವನಾಥ ರೈ ಸಾಗು, ಕೆಯ್ಯೂರು ಮಾಡಾವು ವರ್ತಕರ ಸಂಘದ ಸ್ಥಾಪಕಾಧ್ಯಕ್ಷ ಆನಂದ ರೈ ದೇವಿನಗರ, ಶ್ರೀ ದುರ್ಗಾ ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಮಧುಸೂದನ್ ಭಟ್ ಕಜೆಮೂಲೆ, ವಿಜಯಕುಮಾರ್ ಸಣಂಗಳ, ಸತೀಶ್ ರೈ ದೇವಿನಗರ, ಕೆಯ್ಯೂರು ದುರ್ಗಾ ಭಜನ ಮಂಡಳಿ ಅಧ್ಯಕ್ಷ ಬೇಬಿ ಪೂಜಾರಿ ದೆರ್ಲ, ವಿಠ್ಠಲ ರೈ ಪೊಯ್ಯೋಳೆ, ಗ್ರಾಮಾಭಿವೃದ್ಧಿ ಯೋಜನೆಯ ಎ ಒಕ್ಕೂಟದ ಅಧ್ಯಕ್ಷೆ ಈಶ್ವರಿ ರೈ, ಸೇವಾನಿರತೆ ಜಯಾ ಪಿ. ರೈ, ಬಿ ಒಕ್ಕೂಟದ ಸೇವಾನಿರತೆ ರಜನಿ, ಯೋಗೀಶ್ ರೈ ಎ.ಕೆ., ಪದ್ಮನಾಭ ರೈ ಇಳಾಂತಜೆ, ದಿನೇಶ್ ಕೆ.ಎಸ್., ಸುಜಯಾ ರೈ, ಸಿಬಂದಿ ಚಂದ್ರಶೇಖರ ರೈ ಕಜೆ, ಕೃಷ್ಣ ಸಾಮಾನಿ ಕೆಯ್ಯೂರು ಉಪಸ್ಥಿತರಿದ್ದರು.ಪ್ರಧಾನ ಅರ್ಚಕ ಶ್ರೀನಿವಾಸ್ ರಾವ್ ಪೂಜಾ ವಿಧಿ ವಿಧಾನ ನೆರವೇರಿಸಿದರು. ಕ್ಷೇತ್ರದ ಅರ್ಚಕ ಆನಂದ ಭಟ್ ಸಹಕರಿಸಿದರು.