Home ಧಾರ್ಮಿಕ ಸುದ್ದಿ ಕೆಯ್ಯೂರು: ಏಕಾಹ ಭಜನ ಮಂಗಲೋತ್ಸವ ಸಂಪನ್ನ

ಕೆಯ್ಯೂರು: ಏಕಾಹ ಭಜನ ಮಂಗಲೋತ್ಸವ ಸಂಪನ್ನ

307
0
SHARE

ಕೆಯ್ಯೂರು : ಶ್ರೀ ದುರ್ಗಾ ಭಜನ ಮಂಡಳಿ ಕೆಯ್ಯೂರು ಇದರ ವತಿಯಿಂದ ನಡೆಯುವ 28ನೇ ವರ್ಷದ ನಗರ ಭಜನೆಯು ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಿ ಸನ್ನಿದಿಯಿಂದ ಪ್ರಾರಂಭಗೊಂಡು 63 ದಿನಗಳ ಪರ್ಯಂತ ರಾತ್ರಿ ನಗರ ಭಜನೆ ನಡೆದು ಜ. 30ರಂದು ಏಕಾಹ ಭಜನಾ ಮಂಗಲೋತ್ಸವವು ಶ್ರೀ ಕ್ಷೇತ್ರದಲ್ಲಿ ನಡೆಯಿತು.

ದೇಗುಲದ ಪ್ರಧಾನ ಆರ್ಚಕರಾದ ಶ್ರೀನಿವಾಸ ರಾವ್‌ ಮತ್ತು ಆನಂದ ಭಟ್ ವೈದಿಕ ವಿಧಿ ನೇರವೇರಿಸಿ ಏಕಾಹ ಭಜನ ಮಂಗಳ್ಳೋತ್ಸವವನ್ನು ಸಮಾಪ್ತಿಗೊಳಿಸಿದರು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್‌.ಬಿ. ಜಯರಾಮ ರೈ ಬಳಜ್ಜ, ಸದಸ್ಯರು, ಶ್ರೀ ದುರ್ಗಾ ಭಜನ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

63 ದಿನಗಳ ಕಾಲ ರಾತ್ರಿ ನಗರ ಭಜನೆಯಲ್ಲಿ ಅರ್ಚಕರಾಗಿ ಸಹಕರಿಸಿದ ಸುಬ್ರಮಣ್ಯ ಅರ್ತ್ಯ ಅವರನ್ನು ಅಂಭಿನಂದಿಸಲಾಯಿತು. ಏಕಾಹ ಭಜನೆ ಕಾರ್ಯಕ್ರಮದಲ್ಲಿ ಒಟ್ಟು ಇಪ್ಪತ್ತು ತಂಡಗಳು ಭಾಗವಹಿಸಿದ್ದವು. ಶ್ರೀ ದುರ್ಗಾ ಭಜನ ಮಂಡಳಿ ಅಧ್ಯಕ್ಷೆ ಬೇಬಿ ಪೂಜಾರಿ ದೇರ್ಲ ಅವರು ನಗರ ಭಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಮತ್ತು ಕೆಯ್ಯೂರು ಶ್ರೀ ದುರ್ಗಾ ಯುವಕ ಮಂಡಲದ ಸಹಕಾರದಿಂದ ಯಕ್ಷಗಾನ ಬಯಲಾಟಕ್ಕೆ ಸಹಕರಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು.

ಯಕ್ಷಗಾನ ಪ್ರದರ್ಶನ

ರಾತ್ರಿ ಶ್ರೀ ಬೆಂಕೀನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ ಕಳವಾರು ಮಂಗಳೂರು, ಉದಯ ಕುಮಾರ್‌ ಕುಂಜತ್ತೂರು ವಿರಚಿತ ತುಳು ಯಕ್ಷಗಾನ ಸತ್ಯದ ‘ಸ್ವಾಮಿ ಕೊರಗಜ್ಜ’ ಶ್ರೀ ಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here