Home ಧಾರ್ಮಿಕ ಕಾರ್ಯಕ್ರಮ ಕೆಯ್ಯೂರು: ಮಹಿಷಮರ್ದಿನಿ ದೇವಿ ಜಾತ್ರೆ ಸಂಪನ್ನ

ಕೆಯ್ಯೂರು: ಮಹಿಷಮರ್ದಿನಿ ದೇವಿ ಜಾತ್ರೆ ಸಂಪನ್ನ

503
0
SHARE

ಕೆಯ್ಯೂರು : ಗ್ರಾಮದ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಾ. 21ರಿಂದ 28ರ ವರೆಗೆ ನಡೆಯಿತು.

ಮಾ. 21ರಂದು ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಗೊನೆ ಮುಹೂರ್ತದೊಂದಿಗೆ ಜಾತ್ರೆ ಕಾರ್ಯಕ್ರಮಗಳಿಗೆ ಚಾಲನೆ ನೀಡ ಲಾಯಿತು. ಮಾ. 23ರಂದು ದೇವಿ ಪಾರಾಯಣ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಪೂಜಾ ಬಲಿ, ವಾಸ್ತುಕಲಶಾಭಿಷೇಕ, ಹೋಮಕುಂಡ ಸಂಸ್ಕಾರ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಮಾ. 24ರಂದು ಬೆಳಗ್ಗೆ 108 ತೆಂಗಿನಕಾಯಿ ಮಹಾಗಣಪತಿ ಹೋಮ ಮತ್ತು ಶತ ಚಂಡಿಕಾ ಯಾಗ, ಉಗ್ರಾಣ ತುಂಬಿಸುವುದು, ಭಕ್ತರಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆ ನಡೆಯಿತು. ಮಾ. 25ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಮಾ. 26ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ರಾತ್ರಿ ದೇವರಿಗೆ ರಂಗಪೂಜೆ, ದೇವರ ಬಲಿ ಹೊರಟು ಭೂತ ಬಲಿ ಮಹೋತ್ಸವ, ವಸಂತ ಕಟ್ಟೆ ಪೂಜೆ ಬಳಿಕ “ಕೆಯ್ಯೂರು ಬೆಡಿ’ ಸುಡುಮದ್ದು ಪ್ರದರ್ಶನ ನಡೆಯಿತು.

ಮಾ. 27ರಂದು ಮಹಾಗಣಪತಿ ಹೋಮ, ಕೋಶ ಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ರಾತ್ರಿ ರಂಗಪೂಜೆ, ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮವಿತ್ತು. ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಸ್‌.ಬಿ. ಜಯರಾಮ ರೈ ಬಳಜ್ಜ, ಸಮಿತಿಯ ಸದಸ್ಯರಾದ ಎನ್‌. ದಿವಾಕರ ರೈ ಸಣಂಗಳ, ಇ. ಸಂತೋಷ್‌ ಕುಮಾರ್‌ ರೈ ಇಳಾಂತಜೆ, ಶ್ರೀನಿವಾಸ ರಾವ್‌ , ಕೆ. ಜಯಂತ ಪೂಜಾರಿ ಕೆಂಗುಡೇಲು, ವೆಂಕಟರಮಣ ಗೌಡ ದೇರ್ಲ, ದಿನೇಶ ಕಾಪುತ್ತಡ್ಕ, ರೂಪಾ ಎಸ್‌. ರೈ ಇಳಾಂತಜೆ, ಭವಾನಿ ಬಾಲಕೃಷ್ಣ ಪಲ್ಲತ್ತಡ್ಕ ಉಪಸ್ಥಿತರಿದ್ದರು.

ಮಾ. 28ರಂದು ಬೆಳಗ್ಗೆ ಉಳ್ಳಾಕುಲು ನೇಮ, ವರ್ಣರ ಪಂಜುರ್ಲಿ, ಶ್ರೀ ರಕ್ತೇಶ್ವರಿ, ಪಿಲಿಚಾಮುಂಡಿ ನೇಮ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಬಳಿಕ ಕುಪ್ಪೆ ಪಂಜುರ್ಲಿ, ಗುಳಿಗ ದೈವದ ನೇಮ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ಜಾತ್ರೆ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here