ಗುತ್ತಿಗಾರು : ಮಡಪ್ಪಾಡಿ ಕೇವಳ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಬೈಲಕೋಲ ಹಾಗೂ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ದೈವದ ನೇಮ ಮಾ. 25 ಮತ್ತು 26ರಂದು ನಡೆಯಿತು.
ಮಾ. 25ರ ಬೆಳಗ್ಗೆ ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ಗಣಹೋಮ, ರಾತ್ರಿ ವಿಷ್ಣುಮೂರ್ತಿ ದೈವದ ಕುಳ್ಚಾಟ, ಮಾ. 26ರ ಮುಂಜಾನೆ ವಿಷ್ಣುಮೂರ್ತಿ ದೈವದ ನೇಮ, ಮಾರಿಕಳ ಪ್ರವೇಶ, ಗುಳಿಗ ದೈವದ ನೇಮ, ಅಣ್ಣಪ್ಪ ಪಂಜುರ್ಲಿ ದೈವದ ನೇಮ ನಡೆಯಿತು.