Home ಧಾರ್ಮಿಕ ಸುದ್ದಿ ಕಟೀಲಿನಲ್ಲಿ ಅನುರಣಿಸಿದ ಸರ್ವ ಮಂಗಲ ಮಾಂಗಲ್ಯೇ ಮಂತ್ರ

ಕಟೀಲಿನಲ್ಲಿ ಅನುರಣಿಸಿದ ಸರ್ವ ಮಂಗಲ ಮಾಂಗಲ್ಯೇ ಮಂತ್ರ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ಕೋಟಿ ಜಪಯಜ್ಞ

945
0
SHARE

ಕಟೀಲು: ಮಾರ್ಕಂಡೇಯ ಪುರಾಣದಲ್ಲಿ ಉದ್ಧರಿಸಲ್ಪಟ್ಟ ದೇವಿ ಮಹಾತೆ¾ಯ ಸ್ತುತಿ ಶ್ಲೋಕವನ್ನು ಭಕ್ತರು ಕೋಟಿ ಸಂಖ್ಯೆಯಲ್ಲಿ ಜಪಿಸುವ ಕೋಟಿ ಜಪಯಜ್ಞದ ಸಮಾರೋಪವು ಕಟೀಲು ಕ್ಷೇತ್ರದ ಭ್ರಾಮರೀ ವನದಲ್ಲಿ ವೈದಿಕ ವಿಧಿವಿಧಾನಗಳಿಂದ ಜರಗಿತು.

ಕಟೀಲು ದುರ್ಗಾಪರಮೇಶ್ವರೀ ಬ್ರಹ್ಮಕಲಶೋತ್ಸವ ಸಮಿತಿಯ ಕೋಟಿ ಜಪಯಜ್ಞದ ಸಂಕಲ್ಪದಂತೆ ಕಳೆದ ಡಿ. 15ರಂದು ಕೋಟಿ ಜಪಯಜ್ಞವನ್ನು ಆರಂಭಿ ಸಲಾಗಿತ್ತು. ಮುಂಬಯಿ, ಚೆನ್ನೈ, ಬೆಂಗಳೂರು ಸಹಿತ ವಿವಿಧ ಜಿಲ್ಲೆಗಳಿಂದ ಸುಮಾರು 30 ಸಾವಿರಕ್ಕೂ ಅಧಿಕ ಜನರು ಹೆಸ ರನ್ನು ನೋಂದಾಯಿ ಸಿಕೊಂಡಿದ್ದರು. ರವಿ ವಾರ ಬೆಳಗ್ಗೆ 5 ಗಂಟೆಯಿಂದಲೇ ಸರತಿ ಸಾಲಿ ನಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಈ ಕೋಟಿ ಜಪದಲ್ಲಿ ಭಾಗಿಯಾದರು.

ವಿವಿಧ ವೈದಿಕ ಕಾರ್ಯಗಳು
ದೇವ ಸ್ಥಾನದ ಬ್ರಹ್ಮಕಲಶೋತ್ಸವದ ಅಂಗ ವಾಗಿ ರವಿವಾರ ಬೆಳಗ್ಗೆ 7ಗಂಟೆಗೆ ತ್ರಿಕಾಲ ಪೂಜೆ, ಭ್ರಾಮರೀ ವನದಲ್ಲಿ ಬೆಳಗ್ಗೆ ಯಿಂದಲೇ ಸುಮಾರು 80 ಕ್ಕೂ ಅಧಿಕ ಪುರೋಹಿತರಿಂದ ಭ್ರಾಮರೀ ವನದಲ್ಲಿ ನವಾಕ್ಷರಿಯಾಗ, ಸಹಸ್ರನಾರಿಧೀ ಕೇಳ ಗಣಯಾಗ, ಸಹಸ್ರಚಂಡಿ ಕಾಸಪ್ತ ಶತೀಪಾರಾಯಣ, ಕುಮಾರಿ ಪೂಜೆ, ಸಹಸ್ರಚಂಡಿಕಾಯಾಗ ಅಗ್ನಿ ಜನನ, ಕೋಟಿ ಜಪಯಜ್ಞ ಪರಿಸಮಾಪ್ತಿ ಜರಗಿದವು.

ರವಿವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯ ತನಕ ಸುಮಾರು ವಿವಿಧ 8 ಕಡೆಗಳಲ್ಲಿ ಕ್ಷೇತ್ರದಲ್ಲಿ ಕೋಟಿ ಜಪಮಂತ್ರವನ್ನು ಪಠಿಸಲಾಯಿತು. ಭ್ರಾಮರೀ ವನದಲ್ಲಿ ಕೌಂಟರ್‌ನಲ್ಲಿ ಕುಂಕುಮ ಪಡೆದು ಮಂತ್ರ ಪಠನ ಮಾಡಿ ಭ್ರಾಮರೀ ವನದಲ್ಲಿ ಕುಂಕುಮ ನೀಡಿ ಬಳಿಕ ಪ್ರಸಾದ ಪಡೆದರು.

ಹರಿದುಬಂದ ಭಕ್ತಸಾಗರ
ಕೋಟಿಜಪ ಯಜ್ಞದ ಪ್ರಯುಕ್ತವಾಗಿ ಕ್ಷೇತ್ರಕ್ಕೆ ಹೆಚ್ಚಿನ ಜನಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ರವಿವಾರ ರಜೆಯ ದಿನವಾದ್ದರಿಂದ ಕ್ಷೇತ್ರವಿಡೀ ಜ ಜನಸಂದಣಿಯಿಂದ ಕೂಡಿತ್ತು. ಭೋಜನಶಾಲೆಯಲ್ಲಿ ಲಕ್ಷಾಂತರ ಭಕ್ತರು ಅನ್ನ ಪ್ರಸಾದವನ್ನು ಸ್ವೀಕರಿಸಿದರು. ಬೆಳಗ್ಗೆ ಉಪಾಹಾರಕ್ಕೆ ಉಪ್ಪಿಟ್ಟು ಅವಲಕ್ಕಿ, ಬಾಳೆಹಣ್ಣು, ಲಡ್ಡು, ಮಜ್ಜಿಗೆ ಮಧ್ಯಾಹ್ನ ಮಹಾ ಅನ್ನಸಂತರ್ಪಣೆಗೆ ಸುವರ್ಣ ಗಡ್ಡೆ ಪಲ್ಯ, ಕ್ಯಾಬೇಜ್‌ ಪಲ್ಯ, ಸೌತೆಕಾಯಿ ಸಾಂಬಾರು, ಬೆಳ್ತಿಗೆ ಅಕ್ಕಿ ಪಾಯಸ, ಲಡ್ಡು ಸ್ವೀಕರಿಸಿದರು. ರವಿವಾರ ಲಕ್ಷಾಂತರು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರಿಂದಾಗಿ ಸಂಚಾರ ದಟ್ಟಣೆ ಕಂಡುಬಂತು. ಸುಮಾರು ವಿವಿಧ 16ಕಡೆಗಳಲ್ಲಿ ಸುವ್ಯವಸ್ಥಿತ ಪಾರ್ಕಿಂಗ್‌ ಮಾಡಲಾಗಿತ್ತು.

LEAVE A REPLY

Please enter your comment!
Please enter your name here