ಕಟೀಲು: ಕೋವಿಡ್-19 ಲಾಕ್‌ಡೌನ್ ತೆರವಾದ ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ರವಿವಾರ ಭಕ್ತರಿಗಾಗಿ ತೆರೆದುಕೊಂಡಿದೆ.
ಇ – ಪಾಸ್ ಪಡೆದುಕೊಂಡ ಭಕ್ತರಿಗಷ್ಟೇ ಪ್ರವೇಶಾವಕಾಶವಿದ್ದು, ರವಿವಾರ 200 ಭಕ್ತರು ಪಾಸ್ ಪಡೆದುಕೊಂಡಿದ್ದರು. ಆದರೆ ಭಾರೀ ಮಳೆ ಹಾಗೂ ಬಸ್ಸಿನ ವ್ಯವಸ್ಥೆ ಕಡಿಮೆಯಿದ್ದ ಕಾರಣ ಕೆಲವು ಭಕ್ತರಷ್ಟೇ ಆಗಮಿಸಿ ದೇವರ ದರ್ಶನ ಪಡೆದರು.
ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಭಕ್ತರ ಥರ್ಮಲ್ ಸ್ಕ್ರೀನಿಂಗ್ ಸಹಿತ ಸರಕಾರದ ಮಾರ್ಗಸೂಚಿಯಲ್ಲಿರುವ ಎಲ್ಲ ಮುನ್ನೆಚ್ಚರಿಕೆಗಳ ಪಾಲನೆ ಮಾಡಲಾಗಿದೆ. ಅನ್ನ ಪ್ರಸಾದ, ತೀರ್ಥ ಪ್ರಸಾದ ವಿತರಣೆಯಾಗಲಿ, ಯಾವುದೇ ಸೇವೆಯಾಗಲೀ ಸದ್ಯಕ್ಕೆ ಇಲ್ಲ; ದೇವಿಯ ದರ್ಶನಕ್ಕಷ್ಟೇ ಅವಕಾಶ ಎಂದು ದೇಗುಲದ ಮೂಲಗಳು ತಿಳಿಸಿವೆ.