ಕಟೀಲು: ಕ್ಷಣವೂ ಶಿಕ್ಷಣವಾಗಬೇಕು, ಚಿತ್ತದ ದಾಸ್ಯ ಹಾಗೂ ವಿತ್ತದ ದಾಸ್ಯ ಏನು ಎಂಬುದು ತಿಳಿದು ಬದುಕಬೇಕು, ದೇವರ ಭಕ್ತಿಯನ್ನು ಅನುಭವಿಸಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಬುಧವಾರ ಕಟೀಲು ಬ್ರಹ್ಮಕಲಶೋತ್ಸವದ ಅಂಗವಾಗಿ ಭ್ರಾಮರಿ ಸಭಾಂಗಣದಲ್ಲಿ ಸಂಪನ್ನಗೊಂಡ ಎಂಟನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತರಿಂದ ಭಕ್ತಿ ಪೂರಕವಾದ ಕೆಲಸ ನಡೆದಿದೆ ಎಂದರು.
ಅರಳು ಮಲ್ಲಿಗೆ ಪಾರ್ಥಸಾರಥಿ ಅವರು “ದಾಸ ಸಾಹಿತ್ಯ ಮತ್ತು ಅಧ್ಯಾತ್ಯ’ ವಿಷಯದ ಬಗ್ಗೆ ಮಾತನಾಡಿ, ದ.ಕ.ದಿಂದಲೇ ದಾಸ ಸಾಹಿತ್ಯ ಹುಟ್ಟಿಕೊಂಡಿದೆ. ಭಗವಂತನನ್ನು ಒಳಗಣ್ಣಿನಿಂದ ನೋಡಿ ಆರಾಧಿಸಿ ಅನುಭವಿಸಬೇಕು ಇದರಿಂದ ಬದುಕು ಸುಂದರವಾಗಲು ಸಾಧ್ಯ ಎಂದರು.
ಕದ್ರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕದ್ರಿಯ ಪ್ರಧಾನ ಅರ್ಚಕ ಡಾ| ಕೆ. ಪ್ರಭಾಕರ ಅಡಿಗ ಕಾಶಿಪಟ್ನ, ಸಸಿಹಿತ್ಲು ಭಗವತಿ ಕ್ಷೇತ್ರದ ಪ್ರಧಾನ ಅರ್ಚಕ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಕುರ್ಲಾ ಬಂಟರ ಸಂಘ ವಿಷ್ಣುಮೂರ್ತಿ ದೇವಸ್ಥಾನದ ನಂದಕುಮಾರ ತಂತ್ರಿ, ಮುಂಬಯಿಯ ಸುನಂದಾ ಶೆಟ್ಟಿ ಮುದಲಾಡಿ, ವಿವಿಧ ಕ್ಷೇತ್ರಗಳ ಗಣ್ಯರಾದ ಶಮಿತಾ ಶೆಟ್ಟಿ, ಚಂದ್ರಶೇಖರ ಐಪಿಎಸ್, ಡಾ| ಎನ್. ನಾರಾಯಣ ಶೆಟ್ಟಿ ಶಿಮಂತೂರು, ಕರ್ನಿರೆ ವಿಶ್ವನಾಥ ಶೆಟ್ಟಿ, ನಂದಳಿಕೆ ಕೃಷ್ಣ ಶೆಟ್ಟಿ, ರಘು ಎಲ್. ಶೆಟ್ಟಿ, ನಲ್ಲೂರು ರಘವೀರ ಶೆಟ್ಟಿ, ಬೊಳ್ನಾಡುಗುತ್ತು ಚಂದ್ರಹಾಸ ರೈ, ಚಂದ್ರಶೇಖರ ಪೂಜಾರಿ, ರಾಮಚಂದ್ರ ದೇವಾಡಿಗ, ಮದ್ಯ ಮೋಹನ ಶೆಟ್ಟಿ, ಬೋಳ ಗೋಪಾಲ ಶೆಟ್ಟಿ, ಸುರತ್ಕಲ್ ಅಶೋಕ ಅಮೀನ್, ವಸಂತ ಶೆಟ್ಟಿ, ಬಳ್ಕುಂಜೆ ವಿರಾರ್ ಶಂಕರ ಶೆಟ್ಟಿ, ಕರಂಬಾರು ವೇಣುಗೋಪಾಲ ಎಲ್. ಶೆಟ್ಟಿ, ನಾರಾಯಣ ಎಂ., ಗಂಗಾಧರ ಅಮೀನ್ ನಾಸಿಕ್, ಶಶಿಧರ ಶೆಟ್ಟಿ ನಾಸಿಕ್, ಈಶ್ವರೀಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ರತ್ನಾಕರ ಶೆಟ್ಟಿ ಮುಂಡ್ಕೂರು, ಜಗನ್ನಾಥ ರಾವ್ ಮದ್ರಾಸು, ಕಮಲಾಕ್ಷ ಬಂಗೇರ, ಗಣೇಶ ಬಂಗೇರ, ಪದ್ಮನಾಭ ಬಂಗೇರ, ಸದಾನಂದ ಆಸ್ರಣ್ಣ ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ಸ್ವಾಗತಿಸಿದರು.