ಕಟೀಲು: ಭಗವಂತನನ್ನು ಹೃದಯ ಮಂಟಪದಲ್ಲಿ ಪ್ರತಿಷ್ಠಾಪಿಸಿ ಆರಾಧಿಸಿದರೆ ದೈವೀ ಕೃಪೆ ಒದಗಲು ಸಾಧ್ಯ. ಇದರಿಂದ ದಾರಿದ್ರé, ದುಃಖ ದೂರವಾಗಿ ಸುಖೀ ಸಮಾಜ ನಿರ್ಮಾಣ ವಾಗುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ ಗುರೂಜಿ ಹೇಳಿದರು.
ಅವರು ಶನಿವಾರ ಶ್ರೀ ಕಟೀಲು ಬ್ರಹ್ಮಕಲಶೋತ್ಸವದ ಅಂಗವಾಗಿ ಸಂಪನ್ನಗೊಂಡ 11ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸಂಸ್ಕೃತಿ ಆಚಾರ ವಿಚಾರಗಳು, ನಮ್ಮ ಪರಂಪರೆ ಮುಂದುವರಿಯಬೇಕಾದರೆ ಬ್ರಹ್ಮಕಲಶೋತ್ಸವದಂತಹ ಕಾರ್ಯಕ್ರಮಗಳು ನಡೆಯ ಬೇಕು ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ, ಶ್ರೀ ಕ್ಷೇತ್ರ ಕಟೀಲು ಶಕ್ತಿ ಕೇಂದ್ರವಾಗಿದ್ದು, ಇದರ ಅಭಿವೃದ್ಧಿ ಬ್ರಹ್ಮಕಲಶೋತ್ಸವದ ಮೂಲಕವಾಗಿ ಸಾಕಾರ ಗೊಂಡಿದೆ ಎಂದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶ್ರೀ ಕ್ಷೇತ್ರ ಕಟೀಲಿನ ಭಕ್ತರ ಶ್ರದ್ಧಾ ಭಕ್ತಿ ಅನನ್ಯವಾದುದು ಎಂದರು.
ಈ ಸಂದರ್ಭ ದಾನಿಗಳನ್ನು ಸಮ್ಮಾನಿಸಲಾಯಿತು. ಖ್ಯಾತ ಚಿಂತಕ ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ರಾಷ್ಟ್ರ ಧರ್ಮ ಬಗ್ಗೆ ಉಪನ್ಯಾಸ ನೀಡಿದರು.
ಗಣ್ಯರಾದ ವೀರಪ್ಪ ಮೊಲಿ, ನಳಿನ್ ಕುಮಾರ್ ಕಟೀಲು, ಅಭಯಚಂದ್ರ ಜೈನ್, ನಾಗಪಾತ್ರಿ ಮತ್ತು ಧರ್ಮದರ್ಶಿ ಸಗ್ರಿ ಗೋಪಾಲಕೃಷ್ಣ ಸಾಮಗ, ಕಾರ್ಕಳ ರಾಜೇಶ್ ಭಟ್, ಕಟೀಲು ದೇಗುಲದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಅನುವಂಶಿಕ ಮೊಕ್ತೇಸರ ಸನತ್ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ರಾಜೇಂದ್ರ ಕುಮಾರ್, ಉದ್ಯಮಿಗಳಾದ ಅಶ್ವತ್ಥ್ ಹೆಗ್ಡೆ, ಗುರ್ಮೆ ಸುರೇಶ್ ಶೆಟ್ಟಿ, ಗುರ್ಮೆ ಹರೀಶ್ ಶೆಟ್ಟಿ, ಬಿ.ಟಿ. ಬಂಗೇರ, ರವಿ ಶೆಟ್ಟಿ, ರವಿರಾಜ ಆಚಾರ್ಯ, ಗಣೇಶ ಹೆಗ್ಡೆ, ಜಗದೀಪ್ ಡಿ. ಸುವರ್ಣ, ಗಣೇಶ ಬಂಗೇರ, ಕಾವೂರು ಅಶೋಕ್ ಡಿ. ಶೆಟ್ಟಿ, ಮಧ್ಯಗುತ್ತು ಕರುಣಾಕರ ಶೆಟ್ಟಿ, ಕಟೀಲು ರುಕ್ಮಯದಾಸ್, ಯಾದವ ಕೋಟ್ಯಾನ್, ಸುರತ್ಕಲ್ ಸಂತೋಷ್ ಶೆಟ್ಟಿ, ಬಾಳ ಶ್ರೀಪತಿ ಭಟ್, ಸುಷ್ಮಾ ಮನಮೋಹನ ಮಲ್ಲಿ, ಶಶಿಕಿರಣ್ ಶೆಟ್ಟಿ, ರವಿ ಶೆಟ್ಟಿ, ಅಶ್ವಥ್ ಹೆಗ್ಡೆ ಉಪಸ್ಥಿತರಿದ್ದರು. ಶಾಸಕ ಉಮಾನಾಥ ಕೋಟ್ಯಾನ್ ಸ್ವಾಗತಿಸಿದರು, ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.