Home ಧಾರ್ಮಿಕ ಸುದ್ದಿ ಕಟೀಲು ಬ್ರಹ್ಮಕಲಶ‌: ನೂತನ ಸ್ವರ್ಣ ಧ್ವಜಸ್ತಂಭ ಪ್ರತಿಷ್ಠೆ

ಕಟೀಲು ಬ್ರಹ್ಮಕಲಶ‌: ನೂತನ ಸ್ವರ್ಣ ಧ್ವಜಸ್ತಂಭ ಪ್ರತಿಷ್ಠೆ

11725
0
SHARE

ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಶುಕ್ರವಾರ ಬೆಳಗ್ಗೆ ನೂತನ ಸ್ವರ್ಣ ಧ್ವಜಸ್ತಂಭ ಪ್ರತಿಷ್ಠೆ ಜರಗಿತು. ಪೂರ್ವಭಾವಿಯಾಗಿ ದೇವಸ್ಥಾನದಲ್ಲಿ ಧ್ವಜ ಕಲಶಾಭಿಷೇಕ, ಗರ್ಭಗುಡಿಯ ಮೇಲಿನ ಶಿಖರ ಕಲಶ ಪ್ರತಿಷ್ಠೆ, ತೀರ್ಥ ಮಂಟ ಪದ ಕಲಶ ಪ್ರತಿಷ್ಠೆಯೂ ದೇವ ಸ್ಥಾನದ ಶಿಬರೂರು ತಂತ್ರಿಗಳಾದ ವೇದ ವ್ಯಾಸ ತಂತ್ರಿಗಳ ಆಚಾರ್ಯತ್ವ, ಶಿಬರೂರು ಕೃಷ್ಣರಾಜ ತಂತ್ರಿಗಳ ಸಹಯೋಗ ದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಿದವು. ಸಾಗುವಾನಿ ಮರವನ್ನು 2 ವರ್ಷಗಳ ಕಾಲ ಎಣ್ಣೆಯಲ್ಲಿ ಹಾಕಿಟ್ಟು ನಿರ್ಮಾಣ ಮಾಡಿದ ಧ್ವಜಸ್ತಂಭಕ್ಕೆ ಸುಮಾರು 8 ಕೆ.ಜಿ. ಚಿನ್ನವನ್ನು ಲೇಪನ ಮಾಡಲಾಗಿದೆ.

ಶುಕ್ರವಾರ ಬೆಳಗ್ಗೆ 5ರಿಂದ ಭಾಗೆಮತ್ಯ ಹೋಮ, ಲಕ್ಷ್ಮೀ ಸಹಸ್ರನಾಮ ಹೋಮ, ಹೊರಗಿನ ನಾಗಸನ್ನಿಧಿಯಲ್ಲಿ ಕಲಶಾಭಿಷೇಕ, ಆಶ್ಲೇಷಾಬಲಿ, ಬೆಳಗ್ಗೆ ಭ್ರಾಮರೀ ವನದಲ್ಲಿ ಬಿಂಬಶುದ್ಧಿ, ನವಗ್ರಹ ಸ್ಥಾಪನೆ, ಸೂರ್ಯಯಾಗ, ಸಹಸ್ರ ಚಂಡಿಕಾ ಸಪ್ತ ಶತೀ ಪಾರಾಯಣ, ಕೋಟಿ ಜಪಯಜ್ಞ, ನವಗ್ರ ಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ ಜರಗಿದವು.

ಸಂಜೆ 5ರಿಂದ ಅದ್ಭುತಶಾಂತಿ, ಉತ್ಸವ ಬಲಿ, ಚಾಮುಂಡಿ ಸನ್ನಿಧಿಯಲ್ಲಿ ವಾಸ್ತು ಪೂಜೆ, ಕಲಶಾಭಿಷೇಕ, ಬ್ರಹ್ಮರ ಸನ್ನಿಧಿ ಯಲ್ಲಿ ವಾಸ್ತು ಪೂಜೆ ಇತ್ಯಾದಿ, ಭ್ರಾಮರೀವನದಲ್ಲಿ ಆಶ್ಲೇಷಾ ಬಲಿ, ನಾಗ ಮತ್ತು ವ್ಯಾಘ್ರ ಚಾಮುಂಡಿ ಕಲಶಾಭಿಷೇಕ, ಕೋಟಿ ಜಪಯಜ್ಞ, ಸಹಸ್ರ ಚಂಡಿಕಾ ಸಪ್ತಶತೀ ಪಾರಾಯಣ, ಶ್ರೀ ಭ್ರಾಮರೀ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಿದವು.

ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನುವಂಶಿಕ ಮೊಕ್ತೇಸರ ಸನತ್‌ಕುಮಾರ್‌ ಶೆಟ್ಟಿ ಕೊಡೆತ್ತೂರುಗುತ್ತು, ಆನು ವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀಹರಿ ನಾರಾಯಣದಾಸ ಆಸ್ರಣ್ಣ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಗೌರವಾಧ್ಯಕ್ಷ ಉಮಾನಾಥ ಕೋಟ್ಯಾನ್‌, ಸುಧೀರ್‌ ಶೆಟ್ಟಿ ಕೊಡೆತ್ತೂರುಗುತ್ತು, ಬಿಪಿನ್‌ ಪ್ರಸಾದ್‌ ಶೆಟ್ಟಿ, ಮುಂಬಯಿ ಸಮಿತಿಯ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕರ್ನಿರೆ ವಿಶ್ವನಾಥ ಶೆಟ್ಟಿ, ಧ್ವಜಸ್ತಂಭದ ಕೊಡುಗೆ ನೀಡಿದ ಕೊಡೆತ್ತೂರು ಮಾಗಂದಡಿ ಯಜಮಾನ ಪಾಂಡುರಂಗ ಎನ್‌. ಶೆಟ್ಟಿ, ದೇವದತ್ತ ಶೆಟ್ಟಿ, ನಿರಂಜನ ಶೆಟ್ಟಿ, ರಾಜೇಂದ್ರ ಶೆಟ್ಟಿ, ಜಗದೀಶ ಆಳ್ವ, ಶ್ರೀಧರ ಆಳ್ವ, ಹರ್ಷರಾಜ ಶೆಟ್ಟಿ ಜಿ.ಎಂ., ಅನಿಲ್‌ ಕುಮಾರ್‌ ಶೆಟ್ಟಿ, ಕಿರಣ್‌ ಶೆಟ್ಟಿ, ನಿತಿನ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here