Home ಧಾರ್ಮಿಕ ಸುದ್ದಿ ಕಟೀಲು ಭ್ರಾಮರಿಗೆ ಇಂದು ಬ್ರಹ್ಮಕಲಶಾಭಿಷೇಕ

ಕಟೀಲು ಭ್ರಾಮರಿಗೆ ಇಂದು ಬ್ರಹ್ಮಕಲಶಾಭಿಷೇಕ

336
0
SHARE

ಕಟೀಲು: ಎಂಟು ದಿನಗಳಿಂದ ವಿಶೇಷ ಪೂಜಾಧಿ ಕಾರ್ಯಕ್ರಮಗಳಿಂದ ಗಮನಸೆಳೆದಿದ್ದ ಶ್ರೀ ಕ್ಷೇತ್ರ ಕಟೀಲಿನಲ್ಲಿ ಒಂಬತ್ತನೇ ದಿನವಾದ ಗುರುವಾರ ವಿಜೃಂಭಣೆಯ ಬ್ರಹ್ಮಕಲಶೋತ್ಸವ ಜರಗಲಿದೆ. ಬ್ರಹ್ಮಕಲಶೋತ್ಸವಕ್ಕೆ ಕ್ಷೇತ್ರವು ಪೂರ್ಣವಾಗಿ ಸಜ್ಜಾಗಿದ್ದು, ಸಂಭ್ರಮವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.

ಬ್ರಹ್ಮಕಲಶೋತ್ಸವದ ಕಾರ್ಯಗಳು ಪೂರ್ಣಗೊಂಡಿವೆ. ಜರಗಲಿರುವ ರಥೋತ್ಸವಕಾRಗಿ ರಥದ ಅಟ್ಟೆಯನ್ನು ಸ್ಟೀಲಿನಿಂದ ನೂತನವಾಗಿ ರಚಿಸಿ, ಸುಂದರಗೊಳಿಸಲಾಗಿದೆ. ಸುತ್ತಲೂ ಮರದ ಹಲಗೆಗಳಲ್ಲಿ ಹೊಸ ಕಲಾಕೃತಿಗಳನ್ನು ರಚಿಸಿ, ಇಡೀ ರಥವನ್ನು ಪಾಲಿಶ್‌ ಮಾಡಲಾಗಿದೆ. ಈ ಬಾರಿ ರಥಬೀದಿ ಅಂಗಡಿಗಳ ತೆರವಿನಿಂದ ದುಪ್ಪಟ್ಟು ಅಗಲವಾಗಿದ್ದು, ಜನರು ರಥೋತ್ಸವದ ಸಂಭ್ರಮವನ್ನು ಕಾಣುವಂತಾಗಲಿದೆ.

ಸುಮಾರು 1.50 ಲಕ್ಷ ಭಕ್ತರಿಗೆ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ವಿವಿಧ 16 ಕಡೆಗಳಲ್ಲಿ ಸುಸಜ್ಜಿತ ಪಾರ್ಕಿಂಗ್‌, ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ವೀಕ್ಷಣೆಗೆ ಸಭಾ ಮಂಟಪ, ಬಸ್‌ ನಿಲ್ದಾಣ, ಪಾಕಶಾಲೆ ಉಗ್ರಾಣ, ಭೋಜನ ಶಾಲೆ ಹಾಗೂ ವಿವಿಧೆಡೆ ಹತ್ತಕ್ಕಿಂತಲೂ ಹೆಚ್ಚು ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here