Home ಧಾರ್ಮಿಕ ಸುದ್ದಿ ಕೇರ್ಪಡ ದೇಗುಲ: ನವರಾತ್ರಿಆಮಂತ್ರಣ ಬಿಡುಗಡೆ

ಕೇರ್ಪಡ ದೇಗುಲ: ನವರಾತ್ರಿಆಮಂತ್ರಣ ಬಿಡುಗಡೆ

793
0
SHARE

ಕಾಣಿಯೂರು : ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ. 9ರಿಂದ ಪ್ರಾರಂಭಗೊಂಡು 19ರ ವರೆಗೆ ವಿವಿಧ ತಂಡಗಳಿಂದ ಭಜನೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ-ಸಭೆ, ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ ಮತ್ತು ಮಹಾಸಂಪ್ರೋಕ್ಷಣೆ ನಡೆಯಲಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಅರ್ಚಕ ಚಿದಾನಂದ ಉಪಾಧ್ಯಾಯ ಕಲ್ಪಡ ಅವರ ವೈದಿಕ ಕಾರ್ಯಕ್ರಮಗಳೊಂದಿಗೆ ಆಮಂತ್ರಣ ಬಿಡುಗಡೆಗೊಂಡಿತು. ಆಡಳಿತ ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ ಪಿ.ಡಿ., ಸದಸ್ಯರಾದ ಗಂಗಾಧರ ಪೊಳೆಂಜ, ಶಿವಾನಂದ ನಾಗಮಜಲು, ಪದ್ಮನಾಭ ರೈ ಎಂಜಿರು, ರಘುನಾಥ ರೈ ಕಟ್ಟೆಬೀಡು, ರಮಾನಂದ ರೈ ಪೂಳೆಂಜ, ಸುಧೀರ್‌ ಕುಮಾರ್‌ ಶೆಟ್ಟಿ ಕೆ., ಬಾಳಕೃಷ್ಣ ರೈ ಪಾರ್ಲ, ಜನಾರ್ದನ ಅಲೆಕ್ಕಾಡಿ, ಬಾಲಕೃಷ್ಣ ಪೂಜಾರಿ, ಕೃಷ್ಣಪ್ಪ ಗೌಡ ಪೂದೆ, ಆನಂದ ಗೌಡ ಮಾನ್ಯಡ್ಕ, ಅವಿನಾಶ್‌ ದೇವರಮಜಲು, ಸೀತಾರಾಮ ರೈ
ಊರುಸಾಗು, ತಿಮ್ಮಪ್ಪ ಗೌಡ ಕಾಮಧೇನು, ಸುಧಾಕರ ಕರಿಂಬಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here