Home ಧಾರ್ಮಿಕ ಸುದ್ದಿ ಕೇರ್ಪಡ: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜಾತ್ರೆ

ಕೇರ್ಪಡ: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜಾತ್ರೆ

1217
0
SHARE

ಕಾಣಿಯೂರು: ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದಂತೆ ಡಿ. 15 ಮತ್ತು 16ರಂದು ಬ್ರಹ್ಮಶ್ರೀ ನಾಗೇಶ್‌ ತಂತ್ರಿಗಳ ನೇತೃತ್ವದಲ್ಲಿ ಜಾತ್ರೆ ನಡೆಯಿತು.

ಡಿ. 15ರಂದು ಗಣಪತಿ ಹವನ, ಚಂಡಿಕಾ ಯಾಗ, ಕಲಾಭಿಷೇಕ, ದೊಡ್ಡ ರಂಗಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ಬೆಡಿ ಪ್ರದರ್ಶನ, ಕಾಣಿಯೂರು ಕಣ್ವರ್ಷಿಕ ಕಲಾಕೇಂದ್ರದ ಸದಸ್ಯರಿಂದ ತುಳುನಾಡ ಸಾಂಸ್ಕೃತಿಕ ವೈಭವ ನೃತ್ಯರೂಪಕ, ಬೆಳ್ತಂಗಡಿಯ ಪ್ರಸಿದ್ಧ ಸ್ಯಾಕೊÕಫೋನ್‌ ವಾದನ, ಅನ್ನಸಂತರ್ಪಣೆ, ಪ್ರಸಾದ ವಿತರಣೆ ನಡೆಯಿತು.

ರವಿವಾರ ಮಹಾಗಣಪತಿ ಹೋಮ, ಕಲಶಪೂಜೆ, ಶ್ರೀ ದೇವರ ಬಲಿಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಪ್ರಸಾದ ವಿತರಣೆ, ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.

ಪಂಜ ಶಾರದಾಂಬ ಯಕ್ಷಗಾನ ಕಲಾ ಸೇವಾ ಟ್ರಸ್ಟ್‌ನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ “ಗದಾಯುದ್ಧ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಸಂಜೆ ಕೇರ್ಪಡದ ಗೌಡ ಮನೆತನದ ಭಂಡಾರ ಮನೆಯಿಂದ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಭಂಡಾರ ಹಿಡಿದು ರಾತ್ರಿ ನೇಮ ನಡೆಯಿತು.

ದೇವಸ್ಥಾನ ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ ಪಿ.ಡಿ., ಸದಸ್ಯರಾದ ನವೀನ್‌ಕುಮಾರ್‌ ಬೊಳ್ಕಜೆ, ಗಂಗಾಧರ ಪೊಳೆಂಜ, ನಾಗೇಶ್‌ ನೂಜಾಡಿ, ರಾಜೀವಿ ರೈ ಕಲ್ಲೇರಿ, ಮಮತಾ ಜಗನ್ನಾಥ ಪೂಜಾರಿ ಮುಕ್ಕೂರು, ಮಾಜಿ ಅಧ್ಯಕ್ಷ ವಸಂತ ನಡುಬೈಲು, ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ಪದ್ಮನಾಭ ರೈ ಎಂಜೀರು, ಭಾಗೀರಥಿ ಮುರುಳ್ಯ, ಸೇವಾ ಸಮಿತಿ ಅಧ್ಯಕ್ಷ ಶಿವಾನಂದ ನಾಗಮಜಲು, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಗುಣವತಿ ನಾವೂರು, ಉಪಸಮಿತಿ ಉಪಾಧ್ಯಕ್ಷ ರಮಾನಂದ ರೈ, ಭಾಗ್ಯಪ್ರಸನ್ನ, ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ನೂಜಾಡಿ, ಯತೀಂದ್ರನಾಥ ರೈ ಪಿ.ಡಿ., ಬಾಲಕೃಷ್ಣ ಆಳ್ವ, ನಾರಾಯಣ ಭಟ್‌ ಕೆ.ಎನ್‌. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here