Home ಧಾರ್ಮಿಕ ಸುದ್ದಿ ಕೇಪು ಶ್ರೀ ಆಂಜನೇಯ ಸ್ವಾಮಿ ಸನ್ನಿಧಿ: ದೃಢಕಲಶ

ಕೇಪು ಶ್ರೀ ಆಂಜನೇಯ ಸ್ವಾಮಿ ಸನ್ನಿಧಿ: ದೃಢಕಲಶ

1955
0
SHARE

ಕಡಬ : ಕುಟ್ರಾಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೇಗುಲದ ವಠಾರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿಲಾಮಯ ಶ್ರೀ ಪಂಚಮುಖೀ ಆಂಜನೇಯ ಸ್ವಾಮಿಯ ದೃಢಕಲಶ ಕಾರ್ಯಕ್ರಮವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರ ಜರಗಿತು.

ಬೆಳಗ್ಗೆ ಕಲಶಪ್ರತಿಷ್ಠೆ, ಗಣಪತಿ ಹೋಮ, ಮಧ್ಯಾಹ್ನ ಕಲಶಾಭಿಷೇಕ ನಡೆದು ಅನಂತರ ಮಹಾಪೂಜೆ, ನಾಗ ತಂಬಿಲ ಹಾಗೂ ದೈವಗಳ ತಂಬಿಲ ನೆರವೇರಿತು. ರಾತ್ರಿ ರಂಗಪೂಜೆ ಜರಗಿತು. ವಾಸ್ತು ಶಾಸ್ತ್ರಜ್ಞ ಪ್ರಸಾದ ಮುನಿಯಂಗಳ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೇಪು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಚಿದಾನಂದ ಗೌಡ ಕೊಯಕ್ಕುರಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಕಾರ್ಯದರ್ಶಿ ಸುರೇಶ್‌ ದೇಂತಾರು, ಉಪಾಧ್ಯಕ್ಷರಾದ ಪುಲಸ್ತಾ ರೈ ಕುಂಟೋಡಿ, ರವಿರಾಜ ಶೆಟ್ಟಿ ಕಡಬ, ವಿಶ್ವನಾಥ ರೈ ಪೆರ್ಲ, ಶಶಾಂಕ ಗೋಖಲೆ ಮಾರ್ಗದಮನೆ, ಮೋನಪ್ಪ ಗೌಡ ನಾಡೋಳಿ, ಬೆಳಿಯಪ್ಪ ಗೌಡ ಕೊಯಕ್ಕುರಿ, ಗಂಗಾಧರ ಗೌಡ ಮೀನಾಡಿ, ಶಿವಪ್ರಸಾದ್‌ ರೈ ಮೈಲೇರಿ, ಕೋಶಾಧಿಕಾರಿ ಹರೀಶ್‌ ರೈ ಹಳ್ಳಿ, ಜತೆ ಕಾರ್ಯದರ್ಶಿಗಳಾದ ಶ್ರೀಧರ ಗೌಡ ಮಠಂತಾಡಿ, ಪುರುಷೋತ್ತಮ ಗೌಡ ಪುರಿಯ, ಜಯಚಂದ್ರ ರೈ ಕುಂಟೋಡಿ, ಮನಮೋಹನ ರೈ ಕೇಪು, ಬಾಲಚಂದ್ರ ಬಜೆತ್ತಡ್ಕ, ದೀಕ್ಷಿತ್‌ ಹಳ್ಳಿ, ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here