ಕೆಂಜಾರು : ಪೇಜಾವರ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯ ದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾನದ ವರ್ಧಂತೋತ್ಸವ ಇತ್ತೀಚೆಗೆ ಜರಗಿತು. ಕಾರ್ಯಕ್ರಮವನ್ನು ಉದ್ಯಮಿ ಲತಾ ಶರತ್ ಸುವರ್ಣ ಉದ್ಘಾಟಿಸಿದರು. ದಯಾನಂದ ಶಾಂತಿ ಇಡ್ಯಾ ಅವರ ಪುರೋಹಿತ್ಯದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿತು.
ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕಾನ ಸಂಘದ ಸ್ಥಾಪಕ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಟಿ. ರಾಮ ಪೂಜಾರಿ, ಮಹಾ ಬಲ ಪೂಜಾರಿ ದೋಟ, ನಾರಾಯಣ ಕೋಟ್ಯಾನ್ ಕಾನ, ಭಾಸ್ಕರ್ ಸಾಲ್ಯಾನ್ ಕಾನ, ಲೋಕೇಶ್ ಕೋಟ್ಯಾನ್ ಅಗ್ರಹಾರ, ಭಾಸ್ಕರ್ ಕೋಟ್ಯಾನ್ ಕಾನ, ಭುಜಂಗ ಪೂಜಾರಿ ಪಡ್ಪು, ಯುವವಾಹಿನಿ ಪಣಂಬೂರು ಘಟಕದ ಮಾಜಿ ಅಧ್ಯಕ್ಷ ಅಗ್ರಹಾರ, ಪ್ರಸಾದ್ ಕೆಂಜಾರು, ದಿನೇಶ್ ಶಾಂತಿಗುಡ್ಡೆ, ಜಯ.ಯು.ಐ. ಕಡವಿನ ಬಳಿ ಪೇಜಾವರ, ನಾರಾಯಣ ಪೂಜಾರಿ ತೋಡ್ಲ, ನೀಲಯ್ಯ ಪೂಜಾರಿ ಪೊರ್ಕೋಡಿ ಉಪಸ್ಥಿತರಿದ್ದರು.
ಸಮ್ಮಾನ ಈ ಸಂದರ್ಭ ಯಕ್ಷಗಾನ ಪ್ರಸಂಗ ಕರ್ತ ಹಾಗೂ ಸುಂಕದಕಟ್ಟೆ ಮೇಳದ ಮ್ಯಾನೇಜರ್ ಶ್ರೀನಿವಾಸ ಸಾಲ್ಯಾನ್ ಅವರನ್ನು ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕಾನ ಅವರು ಸಮ್ಮಾನಿಸಿದರು. ಕಾರ್ಯಕ್ರಮದ ಅಂಗವಾಗಿ ಗಣಪತಿ ಹೋಮ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಭಜನೆ, ಅನ್ನದಾನ, ಸುಂಕದಕಟ್ಟೆ ಅಂಬಿಕ ಅನ್ನಪೂರ್ಣೇಶ್ವರಿ ಯಕ್ಷಗಾನ ಮಂಡಳಿ ಅವರಿಂದ ಭಾಗ್ಯದ ಬಂಗಾರಿ ಯಕ್ಷಗಾನ ಜರಗಿತು.