ಪುಂಜಾಲಕಟ್ಟೆ : ಅಮಾಡಿ ಗ್ರಾಮದ ಕೆಂಪುಗುಡ್ಡೆ ಸರ್ವಶಕ್ತಿ ಯುವಕ ಸಂಘದ 15ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ಪೌರ ಸಮ್ಮಾನ ಕಾರ್ಯಕ್ರಮವು ಸೆ. 3ರಂದು ಕೆಂಪುಗುಡ್ಡೆಯಲ್ಲಿ ಜರಗಿತು.
ಕೊçಲ ಸ.ಮಾ. ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ವೇದಾನಂದ ಕಾರಂತ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಯವ ಜನತೆ ಸಾಂಘಿಕವಾಗಿ ಯುವಕ ಸಂಘಗಳಲ್ಲಿ ತೊಡಗಿಸಿಕೊಂಡು ಸಮಾಜಮುಖೀಯಾದ ಕಾರ್ಯಗಳನ್ನು ಮಾಡಿದಾಗ ಸಮಾಜದ ಅಭಿವೃದ್ಧಿಗೆ ಕೊಡುಗೆಯಾಗುತ್ತದೆ. ಸಂಘ ಶಕ್ತಿ ಸರ್ವಶಕ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಹಿಂದೂ ಜಾಗರಣಾ ವೇದಿಕೆ, ಸರ್ವಶಕ್ತಿ ಯುವಕ ಮಂಡಲದ ವತಿಯಿಂದ ಕಿನ್ನಿಬೆಟ್ಟು, ಕೆಂಪುಗುಡ್ಡೆ ಸ.ಹಿ.ಪ್ರಾ. ಶಾಲೆ ಯಿಂದ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ವರ್ಗಾವಣೆಗೊಂಡ ವೇದಾನಂದ ಕಾರಂತ ಅವರನ್ನು ಸಮ್ಮಾನಿಸಲಾಯಿತು. ಯುವಕ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.