Home ಧಾರ್ಮಿಕ ಸುದ್ದಿ ಕೆಮ್ತೂರು ದೇಗುಲ: ಬ್ರಹ್ಮಕಲಶಾಭಿಷೇಕ, ರಥೋತ್ಸವ ಸಂಪನ್ನ

ಕೆಮ್ತೂರು ದೇಗುಲ: ಬ್ರಹ್ಮಕಲಶಾಭಿಷೇಕ, ರಥೋತ್ಸವ ಸಂಪನ್ನ

439
0
SHARE

ಉಡುಪಿ : ಕೆಮ್ತೂರು ಶ್ರೀ ವಿಷ್ಣುಮೂರ್ತಿ ದೇವಳದಲ್ಲಿ ಬ್ರಹ್ಮಕಲಶಾಭಿಷೇಕ ಮತ್ತು ರಥೋತ್ಸವವು ದೇಗುಲದ ಪುರೋಹಿತ ವರ್ಗ, ತಂತ್ರಿ ವರ್ಗ, ಆಡಳಿತ ಮೊಕ್ತೇಸರರು ಹಾಗೂ ಗ್ರಾಮಸ್ಥರ ಮುಂದಾಳತ್ವದಲ್ಲಿ ನಡೆಯಿತು.

ಫೆ. 27ರಂದು ಕೆಮ್ತೂರು ಸುಂದರ ಶೆಟ್ಟಿ ಅವರ ಪುತ್ರ ಯತೀಶ್‌ ಶೆಟ್ಟಿ ಮತ್ತು ಸುರೇಖಾ ಶೆಟ್ಟಿ ದಂಪತಿಗಳ ಸಹಕಾರದಿಂದ ಹಸಿರುವಾಣಿ ಹೊರೆಕಾಣಿಕೆಯನ್ನು ಓಂ ಸಾಯಿ ಮನೆಯಿಂದ ದೇಗುಲಕ್ಕೆ ತರಲಾಯಿತು. ಮಾ. 1ರಂದು ಬ್ರಹ್ಮಕಲಶಾಭಿಷೇಕದಿಂದ ಪ್ರಾರಂಭಗೊಂಡ ಮಹೋತ್ಸವವು ಧ್ವಜಾರೋಹಣ, ಬ್ರಹ್ಮದರ್ಶನ, ಪ್ರಸನ್ನಪೂಜೆ, ರಥೋತ್ಸವಾದಿ ಕಾರ್ಯಕ್ರಮಗಳು ಜರಗಿತು.

ದೇವಳದ ಗರ್ಭಗುಡಿಗೆ ಸುವರ್ಣ ಶಿಖರ ಸಮರ್ಪಿಸಿದ ಶ್ರೀಕಾಂತ್‌ ಜಿ. ಭಟ್‌ ಮತ್ತು ಕೃಷ್ಣರಾಜ್‌ ಜಿ. ಭಟ್‌, ತೀರ್ಥ ಮಂಟಪದ ಸುವರ್ಣ ಶಿಖರ ಸಮರ್ಪಿಸಿದ ವಿನೋದ ಸುಂದರ ಶೆಟ್ಟಿ ಮತ್ತು ಮಕ್ಕಳು, ರಥದ ಕೊಠಡಿ ಸಮರ್ಪಿಸಿದ ಕೃಷ್ಣಮೂರ್ತಿ ಭಟ್‌, ಹಸಿರುವಾಣಿ ಹೊರೆಕಾಣಿಕೆ ಸೇವೆ ನೀಡಿದ ಉಡುಪಿ ಗಣೇಶ್‌ ಮಾರ್ಬಲ್ಸ್‌ನ ಯತೀಶ್‌ ಶೆಟ್ಟಿ, ಪ್ರತೀ ಸಂಕ್ರಮಣದಂದು ಆನ್ನಸಂತರ್ಪಣೆ ಸೇವೆ ನೀಡುತ್ತಾ ಬಂದಿರುವ ಸುಚಿತ್ರಾ ಜಿತೇಂದ್ರ ಹೆಗ್ಡೆ ಅವರನ್ನು ಶ್ರೀರಮಣ ತಂತ್ರಿ, ಕೃಷ್ಣಮೂರ್ತಿ ತಂತ್ರಿ ಅವರು ಸಮ್ಮಾನಿಸಿದರು. ಶ್ರೀಕಾಂತ್‌ ಜಿ. ಭಟ್‌, ಜಯರಾಮ್‌ ಶೆಟ್ಟಿ, ನಿರಂಜನ್‌ ಭಟ್‌, ಸುಂದರ ಶೆಟ್ಟಿ, ಸಂಜೀವ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here