ನೆಲ್ಯಾಡಿ : ಕೊಕ್ಕಡದ ಕೆಂಪಕೋಡಿಯಲ್ಲಿ ಜೀರ್ಣೋದ್ಧಾರ ಗೊಂಡ ಗ್ರಾಮ ದೈವಸ್ಥಾನ ರಾಜನ್ ದೈವ ಶ್ರೀ ಕಲ್ಕುಡ-ಕಲ್ಲುರ್ಟಿ ದೈವಸ್ಥಾನದ ನವೀಕರಣ, ಪುನಃ ಪ್ರತಿಷ್ಠೆ ಹಾಗೂ ನೇಮ ವೇದಮೂರ್ತಿ ಶ್ರೀ ಹರಿಪ್ರಸಾದ್ ವೈಲಾಯ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು. ಫೆ. 7ರಿಂದಲೇ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಉಗ್ಗಪ್ಪ ಪೂಜಾರಿ ಕೆಂಪಕೋಡಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಆಲಂಕಾರು ಬುಡೇರಿಯಾ ಶ್ರೀದೇವಿ ಉಳ್ಳಾಲಕ್ತಿ ದೈವಸ್ಥಾನದ ಆಡಳಿತ ಪ್ರಮುಖ ಈಶ್ವರ ಗೌಡ ಪಜ್ಜಡ್ಕ, ಕೊಕ್ಕಡ ಸ.ಪ.ಪೂ, ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈ ಪಿ., ಕೊಕ್ಕಡ ವಲಯ ಎಸ್.ಕೆ.ಡಿ.ಆರ್.ಡಿ.ಪಿ. ಮೇಲ್ವಿಚಾರಕ
ಆದಿತ್ಯ ಎಸ್. ಮಾತನಾಡಿದರು.
ಮಹಿಳಾ ಸಮಿತಿ ಅಧ್ಯಕ್ಷೆ ಹೇಮಾವತಿ, ಕಾರ್ಯದರ್ಶಿ ಜಯಶ್ರೀ, ಪುನಃ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷ ಶಿವಾನಂದ
ಎಸ್., ಕಾರ್ಯದರ್ಶಿ ಜಗದೀಶ್ ಕೆ., ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಕೆ. ನಾರಾಯಣ ಗೌಡ ಆಲಂಬಿಲ, ಕಾರ್ಯದರ್ಶಿ ಶ್ರೀನಾಥ್ ಬಡೆಕ್ಕೆಲು, ಯೋಗೀಶ್ ಗೌಡ ಆಲಂಬಿಲ,
ಯಶೋಧರ ಗೌಡ ಆಲಂಬಿಲ, ಬಾಲಕೃಷ್ಣ ಗೌಡ ಬಳಕ್ಕ, ಶ್ರೀಧರ ಗೌಡ ಕೆಂಗುಡೇಲು ಉಪಸ್ಥಿತರಿದ್ದರು.
ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ತೋರಣ ಮುಹೂರ್ತ, ದೈವಗಳ ಭಂಡಾರ ತೆಗೆದು ನೇಮ ನಡೆಯಿತು. ರಾತ್ರಿ ಅನ್ನಸಂತರ್ಪಣೆ, ಅಪ್ಪಂಗಾಯಿ,
ಕೈಕಾಣಿಕೆ, ಪ್ರಸಾದ ವಿತರಣೆ ಮಾಡಲಾಯಿತು.