ಕಟಪಾಡಿ: ಕೆಮುಂಡೇಲು ಶ್ರೀ ಪಾಂಡುರಂಗ ಭಜನ ಮಂಡಳಿಯಲ್ಲಿ ಲಕ್ಷ ತುಳಸಿ ಅರ್ಚನಾ ಕಾರ್ಯಕ್ರಮ ಜರಗಿತು. ಅದರ ಅಂಗವಾಗಿ ನಡೆದ ಧಾರ್ಮಿಕ ಸಭಾ
ಕಾರ್ಯಕ್ರಮವು ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೆಮುಂಡೇಲು ಪ್ರದೇಶದ 1 ರಿಂದ ಪದವಿವರೆಗಿನ 96 ಬಡ ವಿದ್ಯಾರ್ಥಿಗಳಿಗೆ ಸುಮಾರು 49,600 ರೂ. ವಿದ್ಯಾರ್ಥಿ ವೇತನ, ಐವರು ಆರ್ಥಿಕ ಸಂಕಷ್ಟದಲ್ಲಿರುವ ಅಶಕ್ತರಿಗೆ 6,000 ರೂ.ವನ್ನು ಸಹಾಯ ಧನವಾಗಿ ವಿತರಿಸಲಾಯಿತು.
ಗುರುವಂದನಾ ಕಾರ್ಯಕ್ರಮದಲ್ಲಿ ಕೆಮುಂಡೇಲು ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ, ಅಧ್ಯಾಪಕಿಯರಿಗೆ ಗುರುವಂದನೆಯನ್ನು ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ವಿಜಯ ಬ್ಯಾಂಕ್ ಎಲ್ಲೂರು ಶಾಖಾ ಪ್ರಬಂಧಕ ಜಗದೀಶ್ ಆಚಾರ್ಯ, ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್, ಬೆಂಗಳೂರಿನ ತೌಳಮಾಧ್ವ ಒಕ್ಕೂಟ ಇದರ ಕಾರ್ಯದರ್ಶಿ ಜಿ. ವಿ. ಆಚಾರ್ಯ, ಪುತ್ತಿಗೆ ಮಠದ ಆಡಳಿತ ಮಂಡಳಿ ಸದಸ್ಯ ನಾಗರಾಜ ಆಚಾರ್ಯ, ಕೆಮುಂಡೇಲು ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಜಗನ್ನಾಥ ಶೆಟ್ಟಿ, ಪೂಜಾ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರೇಮಲತಾ ಆಚಾರ್ಯ, ಮಾಜಿ ಕೆಮುಂಡೇಲು ಪಾಂಡುರಂಗ ಭಜನ ಮಂಡಳಿ ಅಧ್ಯಕ್ಷ ಚಂದ್ರಶೇಕರ ಶೆಟ್ಟಿಗಾರ್, ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ದಾನಿ ಗೋಪ ಶೆಟ್ಟಿಗಾರ್, ಅಧ್ಯಾಪಕಿ ಪುಷ್ಪಾ ಎಸ್. ಮುಂತಾದವರು ಉಪಸ್ಥಿತರಿದ್ದರು.
ಪಿ. ರಾಘವೇಂದ್ರ ರಾವ್ ಸ್ವಾಗತಿಸಿದರು. ಪಿ.ಕೃಷ್ಣಾನಂದ ರಾವ್ ಪ್ರಸ್ತಾವನೆಗೈದರು. ಗೋಪಾಲಕೃಷ್ಣ ಉಳ್ಳೂರು ವಂದಿಸಿದರು. ಉಪಾನ್ಯಾಸಕ ಹರೀಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.