Home ಧಾರ್ಮಿಕ ಸುದ್ದಿ ಕೆಮ್ಮಿಂಜೆ: ಹೊರೆಕಾಣಿಕೆ, ಬಿಂಬ ಮೆರವಣಿಗೆ

ಕೆಮ್ಮಿಂಜೆ: ಹೊರೆಕಾಣಿಕೆ, ಬಿಂಬ ಮೆರವಣಿಗೆ

1620
0
SHARE

ನಗರ: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪಂಚಮಿ ಉತ್ಸವ, ಆಶ್ಲೇಷಾ ಬಲಿ, ನಾಗತಂಬಿಲ ಹಾಗೂ ಷಷ್ಠಿ ಮಹೋತ್ಸವದ ಅಂಗವಾಗಿ ಮಂಗಳವಾರ ಶ್ರೀ ಮಹಾ ಲಿಂಗೇಶ್ವರ ದೇವಾಲಯದಿಂದ ಹೊರೆಕಾಣಿಕೆ, ಮಹಾವಿಷ್ಣು ದೇವರ ಉತ್ಸವ ಮೂರ್ತಿಗೆ ಸ್ವರ್ಣಕಲಶ ಹಾಗೂ ಧೂಮಾವತಿ ದೈವದ ಬಿಂಬ ಮೆರವಣಿಗೆ ನಡೆಯಿತು.

ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ಮೆರವಣಿಗೆಯನ್ನು ಉದ್ಘಾಟಿಸಿದರು. ಅನಂತರ ವಿವಿಧ ವಾಹನಗಳ ಮೂಲಕ ಮೆರವಣಿಗೆ ನಗರದ ಮುಖ್ಯ ರಸ್ತೆ, ದರ್ಬೆ, ಕೂರ್ನಡ್ಕದ ಮೂಲಕ ಕೆಮ್ಮಿಂಜೆ ದೇವಾಲಯಕ್ಕೆ ಸಾಗಿತು. ಬ್ಯಾಂಡ್‌ ಮೇಳ ವಿಶೇಷ ಆಕರ್ಷಣೆಯಾಗಿತ್ತು. ದೇವಾಲಯದ ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳು, ನೂರಾರು ಭಕ್ತರು ಪಾಲ್ಗೊಂಡರು.

ದೇವಾಲಯದಲ್ಲಿ ಬ್ರಹ್ಮಶ್ರೀ ನಾಗೇಶ ತಂತ್ರಿಯವರ ನೇತೃತ್ವದಲ್ಲಿ, ಬೆಳಗ್ಗೆ ಶ್ರೀ ದೇವರಿಗೆ ಪವಮಾನಾಭಿಷೇಕ, 12 ತೆಂಗಿನಕಾಯಿ ಮಹಾಗಣಪತಿ ಹೋಮ, ಬಿಂಬ ಶುದ್ಧಿ, ಪಂಚವಿಂಶತಿ, ಕಲಶಪೂಜೆ, ದೇವರಿಗೆ ಕಲಶಾಭಿಷೇಕ ನೆರವೇರಿತು. ಮಹಾವಿಷ್ಣು ದೇವರ ಉತ್ಸವ ಮೂರ್ತಿಗೆ ಸ್ವರ್ಣಕವಚವನ್ನು ಸೇವಾಕರ್ತ ಉದ್ಯಮಿ ನಾಗೇಶ್‌ ರಾವ್‌ ಅತ್ತಾಳ ಕುಟುಂಬದವರು ಸಮರ್ಪಿಸಿದರು. ಆ ಪ್ರಯುಕ್ತ ಕ್ಷೇತ್ರದಲ್ಲಿ ಶ್ರೀ ಸ್ಕಂದ ಹೋಮ ಮತ್ತು ಶ್ರೀ ಮಹಾವಿಷ್ಣು ಹೋಮ ನಡೆದವು. ಕ್ಷೇತ್ರದ ಧೂಮಾವತಿ ದೈವದ ಬಿಂಬವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯಿಂದ ಅರ್ಪಣೆ ಮಾಡಲಾಯಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭಜನೆ, ರಾತ್ರಿ ಕಾರ್ತಿಕಪೂಜೆ, ಪ್ರಸಾದ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here