Home ಧಾರ್ಮಿಕ ಸುದ್ದಿ ಕೆಮ್ಮಣ್ಣು ಕೋಡಿ ಕಂಡಾಳ ಕ್ಷೇತ್ರ ಬಬ್ಬುಸ್ವಾಮಿ ದೈವಸ್ಥಾನ

ಕೆಮ್ಮಣ್ಣು ಕೋಡಿ ಕಂಡಾಳ ಕ್ಷೇತ್ರ ಬಬ್ಬುಸ್ವಾಮಿ ದೈವಸ್ಥಾನ

1275
0
SHARE

ಮಲ್ಪೆ: ಬಬ್ಬುಸ್ವಾಮಿ ಜನ್ಮಸ್ಥಳವಾದ ಕೆಮ್ಮಣ್ಣು ಪಡುತೋನ್ಸೆ ಶ್ರೀ ಕೋಡಿ ಕಂಡಾಳ ಕ್ಷೇತ್ರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಗರ್ಭಗುಡಿ ಸಮರ್ಪಣೆ ಹಾಗೂ ಸಾನ್ನಿಧ್ಯಗಳ ಪುನರ್‌ ಪ್ರತಿಷ್ಠಾಪನಾ ಕಾರ್ಯಕ್ರಮವು ರವಿವಾರ ನಡೆಯಿತು.  ಬೆಳಗ್ಗೆ 9.15ರ ಮಿಥುನ ಲಗ್ನ ಸುಮುಹೂರ್ತದಲ್ಲಿ ವೇ|ಮೂ| ಹಯವದನ ಭಟ್‌ ನೇತೃತ್ವದಲ್ಲಿ ನೂತನ ಶಿಲಾಮಯ ಗರ್ಭಗುಡಿ ಸಮರ್ಪಣೆ ನಡೆಯಿತು. ಬಳಿಕ ಸಾನ್ನಿಧ್ಯಗಳ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಅಷ್ಟೋತ್ತರ ಶತ ಕಲಶಾರಾಧನೆ ಜರಗಿತು. ಅ‌ನಂತರ ದೈವಗಳ ದರ್ಶನ ನಡೆದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರಗಿತು.

ದೈವಸ್ಥಾನದ ಆಡಳಿತ ಮೊಕ್ತೇಸರ ಕೆ. ರಘುರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಧುಸೂದನ್‌ ಪೂಜಾರಿ ಕೆಮ್ಮಣ್ಣು, ಜತೆ ಕಾರ್ಯದರ್ಶಿಗಳಾದ ನಿತ್ಯಾನಂದ ಕೆಮ್ಮಣ್ಣು, ಡಾ. ಪ್ರೇಮದಾಸ್‌. ಜಿ. ಕೋಶಾಧಿಕಾರಿ ಪ್ರೇಮನಾಥ್‌ ಜಿ., ಶಂಭು ಶೆಟ್ಟಿ, ಅರ್ಚಕ ವಿನೋದ್‌ ಪಿ.ಕೆ.,
ಗುರಿಕಾರ ಸುಧಾಕರ ಮಾಸ್ತರ್‌, ಸುಂದರ ಶೆಟ್ಟಿ ಕಂಡಾಳ, ನಾಗರಾಜ್‌ ಶೆಟ್ಟಿ, ಕರುಣಾಕರ ಶೆಟ್ಟಿ , ಕಂಡಾಳ ಕುಟುಂಬಸ್ಥರು, ಊರ ಹತ್ತು ಸಮಸ್ತರು ಪಾಲ್ಗೊಂಡಿದ್ದರು.

ಇಂದು ಸಿರಿಸಿಂಗಾರದ ನೇಮ
ಎ. 30ರಂದು ಬೆಳಗ್ಗೆ ನೇಮೋತ್ಸವದ ಗಜಕಂಬ ಪ್ರತಿಷ್ಠಾಪನೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಭಂಡಾರ ಇಳಿದು, ಶ್ರೀ ಬಬ್ಬುಸ್ವಾಮಿ ಹಾಗೂ ತನ್ನಿಮಾನಿಗ ದೈವದ ನೇಮೋತ್ಸವ ನಡೆಯಲಿರುವುದು.

ಮೇ 1ರಂದು ಬೆಳಗ್ಗೆ ಧೂಮಾವತಿ ಬಂಟ ದೈವಗಳ, ಮಧ್ಯಾಹ್ನ ಮಹಾ ಗುಳಿಗದ್ವಯರ, ಸಂಜೆ ನೀಚ ದೈವದ ನೇಮಗಳು ಜರಗಲಿವೆ.  ಮೇ 2ರಂದು ಕುರಿತಂಬಿಲ ಸೇವೆ ನಡೆಯಲಿರುವುದು.

LEAVE A REPLY

Please enter your comment!
Please enter your name here