Home ಧಾರ್ಮಿಕ ಸುದ್ದಿ ಕೆಮ್ಮಣ್ಣು ಕೋಡಿ ಕಂಡಾಳ: ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

ಕೆಮ್ಮಣ್ಣು ಕೋಡಿ ಕಂಡಾಳ: ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

1725
0
SHARE

ಮಲ್ಪೆ : ಸುಮಾರು 3 ಕೋ. ರೂ. ವೆಚ್ಚದಲ್ಲಿ ಶಿಲಾಮಯವಾಗಿ ನವೀಕರಣ ಗೊಳ್ಳುತ್ತಿರುವ ಕೆಮ್ಮಣ್ಣು ಪಡುತೋನ್ಸೆ ಕೋಡಿ ಕಂಡಾಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು ಭರದಿಂದ ಸಾಗುತ್ತಿದೆ.

ಬಬ್ಬುಸ್ವಾಮಿ ಜನ್ಮಸ್ಥಳವೆನ್ನಲಾದ ಕೋಡಿ ಕಂಡಾಳ ಕ್ಷೇತ್ರದಲ್ಲಿ 125ವರ್ಷ ಹಳೆಯದಾಗಿದ್ದು, 1985ರಲ್ಲಿ ನವೀಕರಣಗೊಳಿಸಲಾಗಿತ್ತು. ಬಬ್ಬುಸ್ವಾಮಿಯನ್ನು ಸಾಕಿದ ಮೂಲ ಮನೆಯೂ ಇಲ್ಲಿದ್ದು ಮಾಯದ ಕಲ್ಲು ಇಲ್ಲಿದ್ದು ಅದೀಗ ಜೀರ್ಣಾವಸ್ಥೆಯಲ್ಲಿದೆ. ಆರೂಢ ಪ್ರಶ್ನೆಯಲ್ಲಿ ಕಂಡು ಬಂದಂತೆ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿಕೊಂಡು ಊರ ಪರವೂರ ದಾನಿಗಳ ಸಹಕಾರದಿಂದ ಗುಡಿ ನಿರ್ಮಾಣದ ಕೆಲಸವನ್ನು ಕೈಗೊಳ್ಳಲಾಗಿದೆ.

ಈಗಾಗಲೇ ಸರಕಾರದ ನೆರವಿನಿಂದ 40 ಲಕ್ಷ ರೂ. ವೆಚ್ಚದಲ್ಲಿ ದೈವಸ್ಥಾನಕ್ಕೆ ಸಂಬಂಧಿಸಿದ ಬಬ್ಬುಸ್ವಾಮಿ ಬಾಲ್ಯದ ದಿನಗಳಲ್ಲಿ ಸ್ನಾನ ಮಾಡುತ್ತಿದ್ದನೆನ್ನಲಾದ ದೇವರ ಕೆರೆಯನ್ನು ಅಭಿವೃದ್ದಿ ಪಡಿಸಲಾಗಿದೆ. ಪರಿವಾರ ದೈವಗಳಾದ ಕಂಬಿಗಾರ, ಬ್ರಹ್ಮರ, ಗುಳಿಗ, ಕೊರಗಜ್ಜ ಗುಡಿ, ಸ್ವಾಗತಗೋಪುರ, ಮೂಲಮನೆ, ಮಾಯದ ಕಲ್ಲು ಸುತ್ತುಪೌಳಿ, ಮತ್ತು ತುಳಸಿಕಟ್ಟೆ, ಸಭಾಭವನದ ಕೆಲಸಗಳು ಭರದಿಂದ ನಡೆಯುತ್ತಿದೆ. ಇದೇ ಎ. 27ರಿಂದ ಮೇ 2ರವರೆಗೆ ಪ್ರತಿಷ್ಠಾ ಕಾರ್ಯಗಳು ನಡೆಯಲಿದೆ ಎಂದು ಕೇÒತ್ರದ ಆಡಳಿತ ಮೊಕೇ¤ಸರ ಕೆ. ರಘುರಾಮ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here