ಸುಳ್ಯ : ಎಣ್ಮೂರು ಗ್ರಾಮದ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನವು ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗುತ್ತಿದ್ದು, ದೇಗುಲದ ಪ್ರಧಾನ ಅರ್ಚಕ ವೇದಮೂರ್ತಿ ಕಲ್ಪಡ ಸುಬ್ರಹ್ಮಣ್ಯ ಉಪಾಧ್ಯಾಯ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಮಂಗಳೂರು ಕಂಕನಾಡಿ ಶ್ರೀ ಬ್ರಹ್ಮ ಬೈದೇರು ಗರಡಿ ಅಧ್ಯಕ್ಷ ಚಿತ್ತರಂಜನ್ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ಸಂತೋಷ್ ಕುಮಾರ್, ವಾಸು ಪೂಜಾರಿ, ಮಾಡಾವು ಹೊಸಮ್ಮ ದೈವಸ್ಥಾನದ ಸಮಿತಿ ಅಧ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ, ಕಾರ್ಯದರ್ಶಿ ಗೋಪಾಲಕೃಷ್ಣ ಪೂಜಾರಿ, ಎಣ್ಮೂರು ಭಜನ ಮಂದಿರದ ಸಂಚಾಲಕ ರಘುನಾಥ ರೈ ಕೆ.ಎನ್., ಕೆಮ್ಮಲೆ ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಜಯಾನಂದ ಕೆ., ಕಾರ್ಯದರ್ಶಿ ಜಯರಾಮ ಐಪಳ, ಕಾರ್ಯದರ್ಶಿ ಹರ್ಷಿತ್ ಹೇಮಳ, ಖಜಾಂಚಿ ಗೋಪಾಲಕೃಷ್ಣ, ಉಳ್ಳಾಕುಲು ಮಾಡದ ಅಧ್ಯಕ್ಷ ಅಶೋಕ್, ಟ್ರಸ್ಟ್ನ ಅಧ್ಯಕ್ಷ ನಾರಾಯಣ ಕೋಡೆ, ಕಾರ್ಯದರ್ಶಿ ಬಾಲಕೃಷ್ಣ ಹೇಮಳ, ಖಜಾಂಚಿ ಪ್ರವೀಣ್ ಹೇಮಳ ಉಪಸ್ಥಿತರಿದ್ದರು.