ಕಿನ್ನಿಗೋಳಿ: ನಮ್ಮ ಸಂಸ್ಕೃತಿಯ ಪ್ರತೀಕದಂತಿರುವ ಗೋಮಾತೆಯ ಪೂಜೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಗೋಮಾತೆ ಜೀವನ ಪೂರ್ತಿ ಹಾಲು ಉಣಿಸುವ ಮಾಹಾತಾಯಿ ವಿಶ್ವಮಾತೆ ಯಾಗಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ನ ಮೂಲ್ಕಿ ಪ್ರಖಂಡದ ಕಾರ್ಯದರ್ಶಿ ಶ್ಯಾಮ ಸುಂದರ ಶೆಟ್ಟಿ ಹೇಳಿದರು.
ಅವರು ನ. 8 ರಂದು ಕೆಮ್ಮಡೆಯ ಗಣೇಶ ಕಟ್ಟೆಯ ಬಳಿಯಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಮೂಲ್ಕಿ ಪ್ರಖಂಡ ಕಿನ್ನಿಗೋಳಿ ಘಟಕದ ಆಶ್ರಯದಲ್ಲಿ ನಡೆದ ದೀಪಾವಳಿ
ಸಂದರ್ಭದಲ್ಲಿ ಮಾತನಾಡಿದರು. ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಿನಿ ಗುಜರನ್, ಪ್ರಕಾಶ ಹೆಗ್ಡೆ ಎಳತ್ತೂರು, ಉಮೇಶ್ ಕುಂದರ್, ಸುಖೇಶ್ ಸಾಲ್ಯಾನ್, ಸುದರ್ಶನ್, ವೆಂಕಟೇಶ್, ಸಂಜಯ್, ಲೀಲಾವತಿ, ಶಶಿಕಲಾ, ಸುರೇಖಾ, ಶೋಭಾ, ಪೂರ್ಣಿಮಾ, ದಿವ್ಯಾ, ಅಶೋಕ್ ಕೆಮ್ಮಡೆ, ಹರೀಶ್ ಮತ್ತಿತರರಿದ್ದರು.