ಕೆಯ್ಯೂರು: ಕೆಯ್ಯೂರು ಗ್ರಾಮದ ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಜೂ. 25ರಂದು ಕೆಯ್ಯೂರು ಗ್ರಾಮದ 5ನೇ ವಾರ್ಡ್ ಸಮಿತಿಯಿಂದ ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಹುಮತದಿಂದ ಗೆದ್ದು ಪುನಃ ಪ್ರಧಾನಿಯಾಗಲು ಪೂಜೆ ನೆರವೇರಿಸಲಾಯಿತು.
ವಿಶೇಷ ದುರ್ಗಾಪೂಜೆಯನ್ನು ದೇಗುಲದಲ್ಲಿ ಪ್ರಧಾನ ಅರ್ಚಕರಾದ ಶ್ರೀನಿವಾಸ ರಾವ್ ಮತ್ತು ಆನಂದ ಭಟ್ ಪ್ರಾರ್ಥನೆ ಮೂಲಕ ನೆರವೇರಿಸಿದರು. ಬಿಜೆಪಿ ಕಾರ್ಯಕರ್ತರಾದ ಜಯರಾಮ ರೈ ಮೇಗಿನಮನೆ, ಪದ್ಮನಾಭ ರೈ ಇಳಂತಾಜೆ, ಪದ್ಮನಾಭ ರೈ ದೇರ್ಲ, ಮಧುಸೂದನ್ ಭಟ್ ಕಜೆಮೂಲೆ, ರವಿಕುಮಾರ್ ಕೈತ್ತಡ್ಕ, ಸತೀಶ್ ರೈ ದೇವಿನಗರ, ಬಾಬು ಪಾಟಾಳಿ ದೇರ್ಲ, ವೆಂಕಪ್ಪ ಗೌಡ, ಕೃಷ್ಣ ಸಾಮಾನಿ ಕೆಯ್ಯೂರು, ಚಂದ್ರಶೇಖರ ಕಜೆ, ಬಾಬು ನಾಯ್ಕ, ಪೂರ್ಣೇಶ್ವರಿ, ಗೀತಾ ಉಪಸ್ಥಿತರಿದ್ದರು.