Home ಧಾರ್ಮಿಕ ಸುದ್ದಿ ಫಾ| ಐವನ್‌ ಡಿ’ಮೆಲ್ಲೊ ನೂತನ ಧರ್ಮಗುರುಗಳಾಗಿ ಅಧಿಕಾರ ಸ್ವೀಕಾರ

ಫಾ| ಐವನ್‌ ಡಿ’ಮೆಲ್ಲೊ ನೂತನ ಧರ್ಮಗುರುಗಳಾಗಿ ಅಧಿಕಾರ ಸ್ವೀಕಾರ

ಕಯ್ನಾರು ಕ್ರಿಸ್ತರಾಜ ದೇವಾಲಯ

1606
0
SHARE

ಕಯ್ನಾರು: ಕಯ್ನಾರು ಕ್ರಿಸ್ತರಾಜ ದೇವಾಲಯದ ನೂತನ ಧರ್ಮಗುರುಗಳಾಗಿ ಫಾದರ್‌ ಐವನ್‌ ಡಿ’ಮೆಲ್ಲೊ ಅಧಿಕಾರ ಸ್ವೀಕರಿಸಿದರು.

ನೆಲ್ಲಿಕ್ಕಾರು ಸಂತ ವಿಕ್ಟರ್‌ ದೇಗುಲದಲ್ಲಿ ಸೇವೆ ಸಲ್ಲಿಸಿ ಕಯ್ನಾರು ದೇವಾಲಯಕ್ಕೆ ವರ್ಗಾ ವಣೆಗೊಂಡ ಐವನ್‌ ಡಿ’ಮೆಲ್ಲೊ ಅವರನ್ನು ಬುಧವಾರ ಸಂಜೆ ಕಯ್ನಾರು ಕ್ರಿಸ್ತರಾಜ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಪ್ರವೇಶ ದ್ವಾರದ ಬಳಿ ಹಾಲಿ ಧರ್ಮಗುರು ಹಾಗೂ ಸುಳ್ಯ ಚರ್ಚ್‌ಗೆ ವರ್ಗಾವಣೆಗೊಂಡಿರುವ ಫಾದರ್‌ ವಿಕ್ಟರ್‌ ಡಿ’ಸೋಜಾ ಹೂ ಹಾರ ಹಾಕಿ ಸ್ವಾಗತಿಸಿದರು. ಬಳಿಕ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಅನಂತರ ನಡೆದ ಅಧಿಕಾರ ಸ್ವೀಕಾರ ಮತ್ತು ಮತ್ತು ಧಾರ್ಮಿಕ ವಿಧಿ ವಿಧಾನ ಕ್ಕೆ ಕಾಸರಗೋಡು ವಲಯ ಪ್ರಧಾನ ಧರ್ಮಗುರು ಹಾಗೂ ಹಾಗೂ ಬೇಳ ಶೋಕಮಾತಾ ಪುಣ್ಯಕ್ಷೇತ್ರದ ಧರ್ಮಗುರು ಫಾದರ್‌ ಜೋನ್‌ ವಾಸ್‌ ಹಾಗೂ ಫಾದರ್‌ ವಿಕ್ಟರ್‌ ಡಿ’ಸೋಜಾ ನೆರವೇರಿಸಿದರು.

ಮೂಡಬಿದಿರೆ ವಲಯದ ಪ್ರಧಾನ ಧರ್ಮಗುರು ಫಾದರ್‌ ಪೌಲ್ ಸಿಕ್ವೇರಾ, ನೆಲ್ಲಿಕ್ಕಾರು ಸಂತ ವಿಕ್ಟರ್‌ ದೇವಾಲಯದ ನೂತನ ಧರ್ಮಗುರು ಫಾದರ್‌ ಮೆಲ್ವಿನ್‌ ಡಿ’ಸೋಜಾ, ಪೆರ್ಮುದೆ ಸಂತ ಲೋರೆನ್ಸ್‌ ದೇವಾಲಯದ ಧರ್ಮಗುರು ಫಾದರ್‌ ಮೆಲ್ವಿನ್‌ ಫೆನಾಂರ್ಡಿಸ್‌, ವಿಜಯ ಜೇಸುರಾಜ್‌ ಕಾನ್ವೆಂಟಿನ ನೂತನ ಸುಪೀರಿಯರ್‌ ಸಿಸ್ಟರ್‌ ಜಾಸ್ಮಿನ್‌ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ನಡೆದ ಸರಳ ಸಮಾರಂಭ ದಲ್ಲಿ ನೂತನ ಧರ್ಮಗುರು ಫಾದರ್‌ ಐವನ್‌ ಡಿ’ಮೆಲ್ಲೊ ಅವರನ್ನು ಸಮ್ಮಾನಿಸಲಾಯಿತು.

ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್‌ ಡಿ’ಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ರೋಶನ್‌ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here