Home ಧಾರ್ಮಿಕ ಸುದ್ದಿ ಕಾಯರ್ತೋಡಿ: ನವರಾತ್ರಿ ಉತ್ಸವ

ಕಾಯರ್ತೋಡಿ: ನವರಾತ್ರಿ ಉತ್ಸವ

276
0
SHARE

ಸುಳ್ಯ : ಇಲ್ಲಿನ ಕಾಯರ್ತೋಡಿ ವಿಷ್ಣು ಸರ್ಕಲ್‌ ಬಳಿ ಇರುವ ಶ್ರೀವರದಾಯಿನಿ ವ್ಯಾಘ್ರ ಚಾಮುಂಡೇಶ್ವರಿ ದೇವ ಸ್ಥಾನದಲ್ಲಿ ನವರಾತ್ರಿ ಉತ್ಸವ ಬುಧವಾರ ಪ್ರಾರಂಭಗೊಂಡಿತು.

ಬೆಳಗ್ಗೆ ಗಣಪತಿ ಹವನ, ಕುಂಕುಮಾರ್ಚನೆ, ಹೂವಿನ ಪೂಜೆ, ಮಹಾಪೂಜೆ ನಡೆಯಿತು. ರಾತ್ರಿ ದೀಪಾರಾಧನೆ, ಭಜನೆ ಕಾರ್ಯಕ್ರಮ, ದುರ್ಗಾಪೂಜೆ, ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಿಗೆ ಕದಿರು ಸಮರ್ಪಣೆ ಸಲ್ಲಿಸಿ, ಪೂಜೆ ನೆರವೇರಿಸಲಾಯಿತು.

ಬುಧವಾರ ಕಾಯರ್ತೋಡಿ ಶ್ರೀವರದಾಯಿನಿ ಚಾಮುಂಡೇಶ್ವರಿ ಭಜನ ಮಂಡಳಿಯವರು, ಗುರುವಾರ ಅಜ್ಜಾವರ ಶ್ರೀಕೃಷ್ಣ ಭಜನ ಮಂಡಳಿಯವರು ಭಜನ
ಕಾರ್ಯಕ್ರಮ ನಡೆಸಿಕೊಟ್ಟರು. ನೂರಾರು ಭಕ್ತರು ಆಗಮಿಸಿ ಪೂಜೆ ನೆರವೇರಿಸಿ, ಪ್ರಸಾದ ಸ್ವೀಕರಿಸಿದರು.

ದೇಗುಲದ ಆಡಳಿತ ಮೊಕ್ತೇಸರ ಡಾ| ಡಿ.ಎಸ್‌. ಶೇಷಪ್ಪ ಮತ್ತು ಇತರ ಮೊಕ್ತೇಸರರು, ಉತ್ಸವ ಸಮಿತಿ
ಅಧ್ಯಕ್ಷ ಚಂದ್ರಶೇಖರ ಅಡಗಾಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here