Home ಧಾರ್ಮಿಕ ಸುದ್ದಿ ಕಾವು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ ಸಂಪನ್ನ

ಕಾವು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ ಸಂಪನ್ನ

1952
0
SHARE

ಬಡಗನ್ನೂರು : ಕಾವು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ ಮಾ. 23ರಿಂದ 28 ತನಕ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಮಾ. 23ರಂದು ಬೆಳಗ್ಗೆ ಉಗ್ರಾಣ ತುಂಬಿಸುವುದು, ಧ್ವಜಾರೋಹಣ, ಬಲಿ ಹೊರಡುವುದು, ಮಹಾ ಮೃತ್ಯುಂಜಯ ಹೋಮ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಉತ್ಸವ ಬಲಿ, ನೂತನ ರಂಗಮಂದಿರದ ಉದ್ಘಾಟನೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ಸಾಮಾಜಿಕ ನಾಟಕ “ತೂಂಡ ಗೊತ್ತಾವು’ ಪ್ರದರ್ಶಿಸಲಾಯಿತು. ಮಾ. 24ರ ಬೆಳಗ್ಗೆ ಉತ್ಸವ ಬಲಿ, ಮಧ್ಯಾಹ್ನ ಮಹಾಪೂಜೆ, ಶ್ರೀ ದೇವರ ಬಲಿ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಉತ್ಸವ ಬಲಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಡರ್‌ ಯುವಕ ಮಂಡಲದ 8ನೇ ವರ್ಷದ ಸಂಭ್ರಮೋತ್ಸವ ತುಡರ್‌ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆ, ಸಮ್ಮಾನ, ಚಾ ಪರ್ಕ ಕಲಾವಿದರಿಂದ ತುಳು ನಾಟಕ “ಪನಿಯರೆ ಅವಂದಿನ’ ನಡೆಯಿತು. ಮಾ. 25ರ ಬೆಳಗ್ಗೆ ಉತ್ಸವ ಬಲಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ತಾಯಂಬಕ ಸೇವೆ, ನಡುದೀಪೋತ್ಸವ ನಡೆಯಿತು.

ದೀಟಿಗೆ ಸಲಾಂ ಮಾ. 26ರಂದು ಬೆಳಗ್ಗೆ ದರ್ಶನ ಬಲಿ, ಮಹಾಪೂಜೆ, ರಾತ್ರಿ ಉತ್ಸವ ಬಲಿ, ಅಮಿcನಡ್ಕಕ್ಕೆ ದೇವರ ಸವಾರಿ, ಮರಳಿ ಬಂದು ಶಯನ ಕಾರ್ಯಕ್ರಮ ನಡೆಯಿತು. ಮಾ. 27ರಂದು ಬೆಳಗ್ಗೆ ಬಾಗಿಲು ತೆರೆಯುವುದು, ಮಹಾಪೂಜೆ, ಸಂಜೆ ಮಂಜಕೊಟ್ಯದಲ್ಲಿ ತಂಬಿಲ, ರಾತ್ರಿ ಮಂಜಕೊಟ್ಯದಿಂದ ಶ್ರೀ ದಂಡನಾಯಕ ದೈವಗಳ ಭಂಡಾರ ಬರುವುದು, ಉತ್ಸವ ಬಲಿ, ಅವಭೃಥ ಸ್ನಾನ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಕಟೀಲು ಮೇಳದವರಿಂದ “ಶ್ರೀದೇವಿ ಲಲಿತೋಪಾಖ್ಯಾನ’ ಯಕ್ಷಗಾನ ನಡೆಯಿತು. ಮಾ. 28ರಂದು ಸೂರ್ಯೋದಯಕ್ಕೆ ಬೆಡಿ ಸೇವೆ, ರಾಜಾಂಗಣದಲ್ಲಿ ಗಂಧಪ್ರಸಾದ ವಿತರಣೆ, ಧ್ವಜಾವರೋಹಣ, ಮಂತ್ರಾಕ್ಷತೆ ನಡೆದು ರಾತ್ರಿ ಶ್ರೀ ದಂಡನಾಯಕ ದೈವಗಳ ದೀಟಿಗೆ ಸಲಾಂ ಜರಗಿತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ದಿವ್ಯನಾಥ ಶೆಟ್ಟಿ ಕಾವು, ಪವಿತ್ರಪಾಣಿ ನನ್ಯಅಚ್ಯುತ ಮೂಡೆತ್ತಾಯ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಅರ್ಚಕರಾದ ಶಿವಪ್ರಸಾದ್‌ ಕಡಮಣ್ಣಾಯ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸುಬ್ರಾಯ ಬಲ್ಯಾಯ ಮದ್ಲ, ಮೋನಪ್ಪ ಪೂಜಾರಿ ಕೆರೆಮಾರು, ಗೋಪಾಲ ಪಾಟಾಳಿ ಪಟ್ಟುಮೂಲೆ, ಗಣೇಶ ಪೂಜಾರಿ ಪಿಲಿಪಂಜರ, ತಿಮ್ಮಯ್ಯ ಉಜುÅಗುಳಿ, ಚೆನ್ನಮ್ಮ ವಿಶ್ವನಾಥ ಗೌಡಕಾವು, ಗುಲಾಬಿ ಜೆ ರೈ ಡೆಂಬಾಳೆ ಭಕ್ತರನ್ನು ಸ್ವಾಗತಿಸಿದರು. ಜಿ.ಪಂ. ಸದಸ್ಯೆಅನಿತಾ ಹೇಮನಾಥ ಶೆಟ್ಟಿ, ಪ್ರೇಮನಾಥ ಶೆಟ್ಟಿ ಕಾವು, ಗ್ರಾ.ಪಂ. ಸದಸ್ಯೆ ಶಶಿಕಲಾ ಚೌಟ, ರವೀಂದ್ರ ಪೂಜಾರಿ, ಅಮೃತಾ, ಹೊನ್ನಪ್ಪ ಪೂಜಾರಿ, ನವೀನ ಬಿ.ಡಿ., ಲೋಹಿತ್‌ ಪೂಜಾರಿ ಭಾಗವಹಿಸಿದ್ದರು.

ಜಾತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿಪಾಲ್ಗೊಂಡಿದ್ದರು. ಸುಮಾರು 7 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here