ಬಡಗನ್ನೂರು : ಕಾವು ಶ್ರೀ ಪಂಚ ಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಅಂಗವಾಗಿ ಮಾ. 23ರಂದು ಬೆಳಗ್ಗೆ ಉಗ್ರಾಣ ತುಂಬಿಸಲಾಯಿತು. ಬಳಿಕ ಧ್ವಜಾರೋಹಣ, ಶ್ರೀ ದೇವರ ಬಲಿ, ಮಹಾಮೃತ್ಯುಂಜಯ ಹೋಮ, ಮಹಾಪೂಜೆ ನಡೆಯಿತು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನ ನಡೆಯಿತು.
ದೇವಸ್ಥಾನದ ವ್ಯವ ಸ್ಥಾಪನ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಕಾವು, ಶ್ರೀ ದಂಡನಾಯಕ ದೈವಸ್ಥಾನದ ಆಡಳಿತ ಮೊಕ್ತೇಸರ ನನ್ಯ ಅಚ್ಯುತ ಮೂಡೆ ತ್ತಾಯ, ಸದಸ್ಯರಾದ ಶಿವಪ್ರಸಾದ್ ಕಡಂಬೊ ಳಿತ್ತಾಯ, ಸುಬ್ರಾಯ್ಯ ಬಲ್ಯಾಯ ಮದ್ಲ, ಮೋನಪ್ಪ ಪೂಜಾರಿ ಕೆ., ಗೋಪಾಲ ಪಾಟಾಳಿ, ಗಣೇಶ್ ಮಾಣಿಯಡ್ಕ, ಚಿನ್ನಮ್ಮ, ತಿಮ್ಮಯ್ಯ, ರವೀಂದ್ರ ಪೂಜಾರಿ, ರಾಮದಾಸ್ ರೈ ಮದ್ಲ, ಸುರೇಖಾ ದಿವ್ಯನಾಥ ಶೆಟ್ಟಿ, ಶರತ್ ಕುಮಾರ್ ರೈ, ರಾಮಚಂದ್ರ ರೈ, ಚಂದ್ರಶೇಖರ ನಿಧಿ ಮುಂಡ, ಬಾಲಕೃಷ್ಣ ಕೆದಿಲಾಯ, ಶ್ರೀಧರ ರಾವ್ ನಿಧಿಮುಂಡ, ನರಸಿಂಹ ಶರ್ಮ, ಜಗನ್ನಾಥ ರೈ ಗುತ್ತು, ಗಂಗಾಧರ ಗೌಡ ಚಾಕೋಟೆ, ಮಹೇಶ್ ರೈ ಅಂಕೋತಿಮಾರ್, ಹರಿಪ್ರಸಾದ್ ರೈ ಭಾಗವಹಿಸಿದರು.