ಮಹಾನಗರ: ಕಾವೂರು ಮಂಜಲ ಕಟ್ಟೆ ಶ್ರೀ ಕೋರಬ್ಬು ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಬ್ರಹ್ಮಶ್ರೀ ವೇ| ಮೂ| ವಿಟuಲದಾಸ್ ತಂತ್ರಿ ದೇರೆಬೈಲ್ ಅವರ ಪೌರೋಹಿತ್ಯದಲ್ಲಿ ಬುಧವಾರ ಆರಂಭಗೊಂಡಿದೆ. ಈ ಸಂದರ್ಭ ನಡೆದ ಧಾರ್ಮಿಕ ಸಭೆ ಯನ್ನು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇ| ಮೂ| ಕಮಲಾದೇವಿ ಪ್ರಸಾದ ಆಸ್ರಣ್ಣ ಉದ್ಘಾಟಿಸಿದರು. ಕೆ.ಸಿ. ಆಳ್ವ ನೆತ್ತಿಲ ಬಾಳಿಕೆ ಎಕ್ಕರಾಡಿ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಡಾ| ಆಶಾಜ್ಯೋತಿ ರೈ ಮಾಲಾಡಿ, ಬಿಲ್ಡರ್ ಸಂದೇಶ್ ಶೆಟ್ಟಿ, ಗಿರಿ ಜಾ ಆರ್. ಭಂಡಾರಿ ಕಾವೂರುಗುತ್ತು, ಶ್ರೀನಿವಾಸ್ಮೂರ್ತಿ ರಾಯರಮನೆ, ಕಿಶೋರ್ ಸುವರ್ಣ ನಂದನಪುರ, ಮಮತಾ ಡಿ. ಶೆಟ್ಟಿ ಕಾವೂರುಗುತ್ತು, ಪ್ರಭಾಕರ್ ಶೆಟ್ಟಿ ಕೊಳಲಬೈಲು, ಸುಧಾಕರ ಶೆಟ್ಟಿ ಕಾವೂರು ಗುತ್ತು, ಮಂಜುನಾಥ ಪ್ರಭು, ನಾರಾಯಣ ಆಚಾರ್ಯ ಕೊಂಬೋಡಿಬೆಟ್ಟು, ರಾಮ ಚಂದ್ರ ಪೂಜಾರಿ ಭಂಡಾರಮನೆ, ಶ್ರೀನಿವಾಸ್ ದುಗ್ಗನಮನೆ, ಪದ್ಮ ಗುರಿಕಾರ ಮುಲ್ಲಕಾಡು, ಸುರೇಶ್ ಪೂಜಾರಿ ಮಂಜಲಕಟ್ಟೆ, ಜಗನ್ನಾಥ,
ಮುರುಗೇಶ್, ಜಗದೀಪ್ ಶೆಟ್ಟಿ, ಸಂದೀಪ್, ಆನಂದ ಪಾಂಗಳ್, ಕೇಶವಸ್ವಾಮಿ ಉಪಸ್ಥಿತರಿದ್ದರು. ಸಾಮೂಹಿಕ ಪ್ರಾರ್ಥನೆ, ಆಲಯ ಸ್ವೀಕಾರ, ತೋರಣ ಮುಹೂರ್ತ, ಪುಣ್ಯಾ ರ್ಚನೆ, ವಾಸ್ತುಪೂಜೆ, ರಾಕ್ಷೋಘ್ನ ಹೋಮ, ಬಲಿ ಕರ್ಮ, ಮಣೆ-ಮಂಚ, ಗುಡಿ ಶುದ್ಧಿ ಕಾರ್ಯಕ್ರಮ ಜರಗಿದವು.