ಮಹಾನಗರ: ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಅಂಗವಾಗಿ ಜರಗಿದ ಧಾರ್ಮಿಕ ಸಭೆಯಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದಜೀ ಆಶೀರ್ವಚನ ನೀಡಿದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಭಾಸ್ಕರ್ ಕೆ. ಮನಪಾ ಸದಸ್ಯ ದೀಪಕ್ ಪೂಜಾರಿ ಉಪಸ್ಥಿತರಿದ್ದರು.
ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಮುಗಿಪು, ಕಾರ್ಯನಿರ್ವಹಣಾಧಿಕಾರಿ ಜಯ ಮ್ಮ ಪಿ., ಸಮಿತಿಯ ಸದಸ್ಯ ರಾದ ವಜ್ರಕುಮಾರ್ ಕರ್ಣಂತ್ತಾಯ ಬಲ್ಲಾಳ್, ಮೋಹನ ಪ್ರಭು, ಸುಮಂತ್ ರಾವ್, ತುಕರಾಮ್ ಸನಿಲ್, ಅನಿತಾ ಶಿವರಾಜ್ ಮೊದಲಾದವರು ಉಪಸ್ಥಿತರಿದ್ದರು.
ಸುಮಂತ್ ರಾವ್ ಸ್ವಾಗತಿಸಿ, ದಿನೇಶ್ ಶೆಟ್ಟಿ ವಂದಿಸಿದರು. ಕೆ. ಸದಾಶಿವ ಶೆಟ್ಟಿ ಬೊಲ್ಪುಗುಡ್ಡೆ ನಿರೂಪಿಸಿದರು.