ಕಾಪು : ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಫೆ. 13ರಂದು ಕುಂಭ ಸಂಕ್ರಮಣದಂದು ಧ್ವಜಾರೋಹಣ, ರಾತ್ರಿ ದೊಡ್ಡರಂಗಪೂಜೆ ಮತ್ತು ಆಯನೋತ್ಸವ ಜರಗಿತು. ದೇಗುಲದ ಪ್ರಧಾನ ತಂತ್ರಿಗಳಾದ ವೇ| ಮೂ| ಶ್ರೀಶ ತಂತ್ರಿ ಕಲ್ಯ ಇವರ ನೇತೃತ್ವದಲ್ಲಿ ಅರ್ಚಕ ವೇ| ಮೂ| ನಾರಾಯಣ ತಂತ್ರಿಯವರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಪೂರ್ವಕ ವಿವಿಧ ಧಾರ್ಮಿಕ – ವಿಧಿ ವಿಧಾನಗಳು ಜರಗಿದವು.
ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ಎಂ. ಬಂಗೇರ, ಕಾರ್ಯ ನಿರ್ವಹಣಾಧಿಕಾರಿ ರವಿಶಂಕರ್ ಕೆ., ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಸ್ವರ್ಣ ಪ್ರಭಾವಳಿ ಸಮರ್ಪಣಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಗಣ್ಯರಾದ ಕೆ.ಪಿ. ಆಚಾರ್ಯ, ಸುಬ್ರಹ್ಮಣ್ಯ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯ, ರತ್ನಾಕರ ಹೆಗ್ಡೆ ಕಲೀಲಬೀಡು, ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀಕರ ಶೆಟ್ಟಿ ಕಲ್ಯ, ಕೆ. ಲಕ್ಷ್ಮೀಶ ತಂತ್ರಿ, ಗಂಗಾಧರ ಸುವರ್ಣ, ಸುರೇಶ್ ಶೆಟ್ಟಿ ಅಯೋಧ್ಯಾ, ವಿಶ್ವನಾಥ ಶೆಟ್ಟಿ ಅರಂತೊಟ್ಟು, ಶ್ರೀಧರ ಶೆಣೈ, ಉಮೇಶ್ ದೇವಾಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವರಾಜ್ ತೊಟ್ಟಂ, ಸರೋಜಿನಿ ಶೆಟ್ಟಿ, ಉಮೇಶ್ ಪೂಜಾರಿ, ರಮಾ ವೈ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.