Home ಧಾರ್ಮಿಕ ಸುದ್ದಿ ಕಾಪು ಕೋಟ್ಯಾನ್‌ಕಾರ್‌ ಮೂಲಸ್ಥಾನದ ವಾರ್ಷಿಕೋತ್ಸವ ಸಂಪನ್ನ

ಕಾಪು ಕೋಟ್ಯಾನ್‌ಕಾರ್‌ ಮೂಲಸ್ಥಾನದ ವಾರ್ಷಿಕೋತ್ಸವ ಸಂಪನ್ನ

884
0
SHARE

ಕಾಪು: ಕಾಪು ಪಡುಗ್ರಾಮ ದೀಪಸ್ತಂಭದ ಬಳಿಯ ಕೋಟ್ಯಾನ್‌ಕಾರ್‌ ಮೂಲಸ್ಥಾನದ ವಾರ್ಷಿಕ ಮಹೋತ್ಸವವು ಎ. 21 ರಂದು ವೇ| ಮೂ| ರಾಘವೇಂದ್ರ ಭಟ್ ಉಚ್ಚಿಲ ಇವರ ನೇತೃತ್ವದಲ್ಲಿ ಜರಗಿತು.

ವಾರ್ಷಿಕ ಮಹೋತ್ಸವದ ಪ್ರಯುಕ್ತ ಕುಟುಂಬಸ್ಥರ ವತಿಯಿಂದ ಶ್ರೀ ಮೂಲ ನಾಗದೇವರಿಗೆ ಆಶ್ಲೇಷಾ ಬಲಿ ಸೇವೆ, ಪಂಚಾಮೃತ ಸೇವೆ, ತುಲಾಭಾರ ಸೇವೆ, ತನು – ತಂಬಿಲ ಸೇವೆ ಮತ್ತು ನಾಗಪಾತ್ರಿ ಸುಬ್ರಹ್ಮಣ್ಯ ಮಧ್ಯಸ್ಥ ಇವರಿಂದ ನಾಗದೇವರ ದರ್ಶನ ನಡೆಯಿತು. ಬಳಿಕ ಮಾಜಿ ಶಾಸಕ ಯು.ಆರ್‌. ಸಭಾಪತಿ ಇವರ ಸೇವಾರ್ಥ ಮಹಾ ಅನ್ನಸಂತರ್ಪಣೆ ಸೇವೆ ನಡೆಯಿತು.

ಇದೇ ಸಂದರ್ಭದಲ್ಲಿ ಕೋಟ್ಯಾನ್‌ಕಾರ್‌ ಮೂಲಸ್ಥಾನದ ಕುಟುಂಬಿಕರ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮತ್ತು ಸಮ್ಮಾನ ಸಮಾರಂಭ ನಡೆಯಿತು.

ಕಾಪು ಕೋಟ್ಯಾನ್‌ಕಾರ್‌ ಮೂಲಸ್ಥಾನದ ಅಧ್ಯಕ್ಷ ದೇಜಪ್ಪ ಕೋಟ್ಯಾನ್‌ ಕಿದಿಯೂರು, ಮಾಜಿ ಶಾಸಕ ಯು.ಆರ್‌. ಸಭಾಪತಿ, ಅಪ್ಪು ಕೋಟ್ಯಾನ್‌ ಶಿವಮೊಗ್ಗ, ಮೂಲಸ್ಥಾನದ ಮುಂಬಯಿ ಸಭಾದ ಅಧ್ಯಕ್ಷ ಕೃಷ್ಣ ಎಂ. ಕೋಟ್ಯಾನ್‌, ಗೌರವಾಧ್ಯಕ್ಷ ಕೃಷ್ಣಪ್ಪ ಕೋಟ್ಯಾನ್‌, ಉಪಾಧ್ಯಕ್ಷರಾದ ಸುಧರ್ಮ ಕೋಟ್ಯಾನ್‌, ಶಂಕರ ಶ್ರೀಯಾನ್‌, ಪ್ರಧಾನ ಕಾರ್ಯದರ್ಶಿ ಗೋವರ್ಧನ್‌ ಕೋಟ್ಯಾನ್‌, ಕೋಶಾಧಿಕಾರಿ ನಾಗೇಶ್‌ ಕೋಟ್ಯಾನ್‌, ಕ್ಷೇತ್ರಾಧ್ಯಕ್ಷ ವಾಮನ ಆರ್‌. ಕೋಟ್ಯಾನ್‌, ಕಟ್ಟಡ ಸಮಿತಿ ಅಧ್ಯಕ್ಷ ಸುಂದರ ಸಿ. ಕೋಟ್ಯಾನ್‌, ಮಹಿಳಾ ಉಪಾಧ್ಯಕ್ಷೆ ಶಶಿಕಲಾ ಕೆ. ಕಾಪು, ಜೊತೆ ಕಾರ್ಯದರ್ಶಿ ಜಿ. ಎನ್‌. ಕೋಟ್ಯಾನ್‌, ಆಡಳಿತ ಮಂಡಳಿ, ಮುಂಬಯಿ ಸಮಿತಿ ಮತ್ತು ಮಹಿಳಾ ಸಮಿತಿಯ ಸದಸ್ಯರು ಮತ್ತು ಕುಟುಂಬಸ್ಥರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here