Home ಧಾರ್ಮಿಕ ಸುದ್ದಿ ಕಟ್ಟಿಂಗೇರಿ ಬ್ರಹ್ಮಲಿಂಗೇಶ್ವರ ದೇಗುಲ: ಮುಷ್ಟಿ ಕಾಣಿಕೆ ಅರ್ಪಣೆ

ಕಟ್ಟಿಂಗೇರಿ ಬ್ರಹ್ಮಲಿಂಗೇಶ್ವರ ದೇಗುಲ: ಮುಷ್ಟಿ ಕಾಣಿಕೆ ಅರ್ಪಣೆ

539
0
SHARE

ಶಿರ್ವ : ಸುಮಾರು 5 ಕೋ.ರೂ ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರ ಗೊಳ್ಳಲಿರುವ ಮೂಡುಬೆಳ್ಳೆ ಕಟ್ಟಿಂಗೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮುಷ್ಟಿಕಾಣಿಕೆ ದೇಗುಲದ ಸಮರ್ಪಣೆ ಸಮಾರಂಭವು ದೇವಸ್ಥಾನದ ಪ್ರಧಾನ ತಂತ್ರಿ ವೇ|ಮೂ| ಪುತ್ತೂರು ಶ್ರೀನಿವಾಸ ತಂತ್ರಿ ಅವರ ನೇತೃತ್ವದಲ್ಲಿ ಶನಿವಾರ ದೇವಸ್ಥಾನದ ಸಾನ್ನಿಧ್ಯದಲ್ಲಿ ನಡೆಯಿತು.

ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ದೇವಸ್ಥಾನದ ಪ್ರಧಾನ ತಂತ್ರಿ ವೇ|ಮೂ| ಪುತ್ತೂರು ಶ್ರೀನಿವಾಸ ತಂತ್ರಿ ಅವರು ಭದ್ರದೀಪದೊಂದಿಗೆ ಮುಷ್ಟಿಕಾಣಿಕೆ ಸಮರ್ಪಿಸಿ ಆಶೀರ್ವಚನ ನೀಡಿದರು. ದೇವಸ್ಥಾನಕ್ಕೆ ಸಂಬಂಧಪಟ್ಟ ಹದಿನಾರು ಮಾಗಣೆಯ ಭಕ್ತರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಗ್ರಾಮಸ್ಥರು ಮತ್ತು ಭಗವದ್ಭಕ್ತರು ಮುಷ್ಟಿಕಾಣಿಕೆ ಸಮರ್ಪಿಸಿದರು. ಬಳಿಕ ಅನ್ನ ಸಂತರ್ಪಣೆ ನೆರವೆೇರಿತು. ಕಾರ್ಯಕ್ರಮದಲ್ಲಿ ಕುತ್ಯಾರು ಮಾಗಣೆಯ ಅರಸರಾದ ಜಿನೇಶ್‌ ಬಳ್ಳಾಲ್‌, ಶಿರ್ವ ನಡಿಬೆಟ್ಟು ಸೀತಾರಾಮ ಹೆಗ್ಡೆ, ಆಡಳಿತ ಮೊಕ್ತೇಸರ ದೇವದಾಸ ಹೆಬ್ಟಾರ್‌, ಮೊಕ್ತೇಸರ ರಾಮಮೋಹನ ಹೆಬ್ಟಾರ್‌, ಅರ್ಚಕ ಗಣಪತಿ ಭಟ್‌, ಕುರ್ಕಾಲು ಪಟ್ಟಾ ಚಾವಡಿಮನೆ ಸುಂದರ ಶೆಟ್ಟಿ,ದೆಂದೂರು ಮನೆ ಸುಧಾಕರ ಶೆಟ್ಟಿ, ಸಕಾರಾಮ ಶೆಟ್ಟಿ, ಅಶೋಕ್‌ ಹೆಗ್ಡೆ ಶಂಕರಪುರ, ಬೆಳ್ಳೆ ಪಟೇಲರ ಮನೆ ದಯಾನಂದ ಶೆಟ್ಟಿ, ಶಿರ್ವ ಕೋಡು ಸದಾನಂದ ಶೆಟ್ಟಿ, ಕಳತ್ತೂರು ಗೋಳಿಬೆಟ್ಟು ಗುತ್ತು ಜಯರಾಮ ಶೆಟ್ಟಿ, ಕೇಂಜ ಅಬ್ಬೆಟ್ಟುಗುತ್ತು ಸಾಯಿನಾಥ ಶೆಟ್ಟಿ,ಬೆಳ್ಳೆ ರಂಜನಿ ಹೆಗ್ಡೆ, ಪಾಂಗಾಳ ಆರ್ಯಾಡಿ ಸುಧೀರ್‌ ಶೆಟ್ಟಿ,ಮಾಣಿಬೆಟ್ಟು ಗರಡಿಮನೆ ಆನಂದ ಪೂಜಾರಿ, ನಿಂಜೂರು ಮೂಡುಮನೆ ಸಂತೋಷ್‌ ಶೆಟ್ಟಿ, ಪಂಜಿಮಾರು ರಾಘು ಶೆಟ್ಟಿ, ಸಂತೋಷ್‌ ಶೆಟ್ಟಿ ಪಂಜಿಮಾರು, ಪುಣೆ ಬಂಟರ ಸಂಘದ ಅಧ್ಯಕ್ಷ ಮಹೇಶ್‌ ಹೆಗ್ಡೆ, ಭಜನಾ ಮಂಡಳಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರು ,16 ಮಾಗಣೆಯ ಭಗವದ್ಭಕ್ತರು,ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here