Home ಧಾರ್ಮಿಕ ಸುದ್ದಿ ಫೆ. 9 – 17: ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ವಾರ್ಷಿಕ ಉತ್ಸವ

ಫೆ. 9 – 17: ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ವಾರ್ಷಿಕ ಉತ್ಸವ

855
0
SHARE

ಕಟಪಾಡಿ: ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ವರ್ಷಾವಧಿ ಉತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪರವೂರು ರಾಕೇಶ ತಂತ್ರಿ ನೇತೃತ್ವದಲ್ಲಿ, ಪ್ರಧಾನ ಅರ್ಚಕ ದೇವದಾಸ ಶಾಂತಿ ಅವರ ಪೌರೋಹಿತ್ಯದಲ್ಲಿ ಫೆ. 9ರಿಂದ ಫೆ. 17ರ ವರೆಗೆ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಫೆ. 9ರಂದು ಸಂಜೆ 3 ಗಂಟೆಗೆ
ಏಣಗುಡ್ಡೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಿಂದ ಹೊರೆಕಾಣಿಕೆ ಮೆರವ ಣಿಗೆ. ಫೆ. 10ರಂದು ಧ್ವಜಾರೋಹಣ, ಶ್ರೀ ವಿಶ್ವನಾಥ ದೇವರು ಹಾಗೂ ಶ್ರೀ ಅನ್ನಪೂರ್ಣೇಶ್ವರೀ ದೇವಿಗೆ ನವಕ ಕಲಶಾಭಿಷೇಕ. ಫೆ. 11ಕ್ಕೆ ಶ್ರೀ ಗಣಪತಿ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರಿಗೆ ನವಕ ಕಲಶಾಭಿಷೇಕ, ಫೆ. 12ಕ್ಕೆ ಶ್ರೀಕೃಷ್ಣ ಮತ್ತು ಶ್ರೀ ಅಯ್ಯಪ್ಪ ದೇವರಿಗೆ ನವಕ ಕಲಷಾಭಿಷೇಕ. ಫೆ. 13ಕ್ಕೆ ಶ್ರೀ ನಾಗದೇವರಿಗೆ, ಶ್ರೀ ಕಲ್ಕುಡ ದೈವಕ್ಕೆ ನವಕ ಕಲಶಾಭಿಷೇಕ ಜರಗಲಿದೆ.

ಫೆ. 14ರಂದು ಮಹಾರುದ್ರ ಹೋಮ, ಶ್ರೀ ಪಾರ್ವತೀಪರಮೇಶ್ವರ ಯಜ್ಞ ಮಂಟಪ ಪ್ರವೇಶ. ಫೆ. 15ಕ್ಕೆ ಶ್ರೀ ವಿಶ್ವನಾಥ ದೇವರಿಗೆ ಶತಸೀಯಾಳಾಭಿಷೇಕ. ರಾತ್ರಿ ರಥೋತ್ಸವ, ಕೆರೆ ದೀಪೋತ್ಸವ, ಕಟ್ಟೆ ಪೂಜೆ. ಫೆ. 16ಕ್ಕೆ ಬೆಳಗ್ಗೆ 11 ಗಂಟೆಗೆ ಹಗಲು ಉತ್ಸವ-ರಥೋತ್ಸವ, ಮಹಾ ಅನ್ನಸಂತರ್ಪಣೆ, ಸಂಜೆ ಪಲ್ಲಕ್ಕಿ ಉತ್ಸವ, ಪೇಟೆ ಸವಾರಿ, ಮೃಗ ಬೇಟೆ, ಶಯನೋತ್ಸವ, ಕವಾಟ ಬಂಧನ. ಫೆ. 17ಕ್ಕೆ ಭಂಡಾರ ಇಳಿದು ಕಲ್ಕುಡ ಕೋಲ ನಡೆಯಲಿದೆ.

ನಿತ್ಯ ಮಹಾಗಣಪತಿ ಹೋಮ, ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಲಲಿತಾ ಸಹಸ್ರನಾಮ, ಭಜನೆ ಜರಗಲಿದೆ ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ, ಉಪಾಧ್ಯಕ್ಷರಾದ ಶ್ರೀಕರ ಅಂಚನ್‌, ಆನಂದ ಮಾಬ್ಯಾನ್‌, ಗೌ|ಪ್ರ| ಕಾರ್ಯದರ್ಶಿ ಯು. ಶಿವಾನಂದ, ಪ್ರಧಾನ ಕೋಶಾಧಿಕಾರಿ ವೀರೇಶ್‌ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here