ಸುರತ್ಕಲ್ : ಇಂದಿನ ಒತ್ತಡದ ಜೀವನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಮನಸ್ಸಿನ ಪ್ರಶಾಂತತೆ ಮತ್ತು ಆರೋಗ್ಯ ವೃದ್ಧಿಗಾಗಿ ಧಾರ್ಮಿಕ ಚಿಂತನೆ ಅಗತ್ಯ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಹೇಳಿದರು.
ಸುರತ್ಕಲ್ ಸಮೀಪದ ಕಟ್ಲ ಶ್ರೀ ಅಬ್ಬಗದಾರಗ ಕ್ಷೇತ್ರದಲ್ಲಿ ಜರಗುವ ಬ್ರಹ್ಮಕಲಶ ಮತ್ತು ಅಷ್ಟಪವಿತ್ರ ನಾಗ ಮಂಡಲೋತ್ಸವದ ಧಾರ್ಮಿಕ ಸಭೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ದೇವಸ್ಥಾನ ಅಥವಾ ದೈವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವವು ಆ ಊರಿನ ಜನರ ಮನಸ್ಸನ್ನು ಮತ್ತು ಗುಣವನ್ನು ಪ್ರತಿ ಬಿಂಬಿಸುತ್ತದೆ. ಊರಿನ ಸಮಸ್ತರ ಶ್ರಮ ಇಂಥದ್ದೊಂದು ಮಹಾತ್ಕಾರ್ಯಕ್ಕೆ ಅತೀ ಅಗತ್ಯ ಎಂದರು.
ಸುರತ್ಕಲ್ ಶಾನ್ ಅಸೋಶಿಯನ್ಸ್ನ ನಳಿನಾಕ್ಷ ಪಂಡಿತ್, ಉದ್ಯಮಿ ರಾಜೇಶ್ ಶೆಟ್ಟಿ ಪೆಡ್ರೆ, ದಯಾನಂದ ಶೆಟ್ಟಿ ಖಂಡಿಗೆ ಬೀಡು, ಬಾಬು ಬಂಡ್ರಿಯಾಲ್ ಸಮಿತಿಯ ಅಧ್ಯಕ್ಷ ಸಾಧುಶೆಟ್ಟಿ, ಘನಶ್ಯಾಮ್ ಶೆಟ್ಟಿ, ಪ್ರಧಾನ ಸಂಚಾಲಕ ವೇಣುವಿನೋದ್ ಶೆಟ್ಟಿ ಬಾಳದ ಗುತ್ತು, ಮೊಕ್ತೇಸರ ಶ್ರೀಧರ ಶೆಟ್ಟಿ ಕಟ್ಲಬೀಡು ಉಪಸ್ಥಿತರಿದ್ದರು. ನಾರಾಯಣ ಪಾಟಾಳಿ ಸ್ವಾಗತಿಸಿದರು. ಶಂಕರನಾರಾಯಣ ವಂದಿಸಿದರು. ದಿವಸ್ಪತಿ ನಿರೂಪಿಸಿದರು.