Home ಧಾರ್ಮಿಕ ಸುದ್ದಿ ಕಾಟಾಜೆ ದೇವಸ್ಥಾನ: ಶಿಲಾನ್ಯಾಸ

ಕಾಟಾಜೆ ದೇವಸ್ಥಾನ: ಶಿಲಾನ್ಯಾಸ

1815
0
SHARE

ಬೆಳ್ತಂಗಡಿ : ಕಾಟಾಜೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದರ ಅಂಗವಾಗಿ ಗರ್ಭಗುಡಿಯ ಶಿಲಾನ್ಯಾಸ ಕಾರ್ಯವು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಉಪಸ್ಥಿತಿಯಲ್ಲಿ ನಡೆಯಿತು.

ನೀಲೇಶ್ವರ ಆಲಂಬಾಡಿ ವೇ| ಮೂ| ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ದೇವಳದ ವಾಸ್ತುಶಿಲ್ಪಿ ಕಾರ್ಕಳದ ರಾಜೇಂದ್ರನ್‌ ಮತ್ತು ರಘುವೀರ್‌ ಹೆಬ್ಟಾರ್‌ ಉಡುಪಿ, ದೇವಳದ ಅರ್ಚಕ ಪ್ರೇಮಾನಂದ ಫಡೆ, ಮಾಜಿ ಶಾಸಕ ಕೆ. ವಸಂತ ಬಂಗೇರ, ನ್ಯಾಯವಾದಿ ಕೆ. ಪ್ರತಾಪ್‌ಸಿಂಹ ನಾಯಕ್‌, ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ್‌ ಕಾಮತ್‌, ಶ್ರೀಕ್ಷೇತ್ರ ಧ.ಗ್ರಾ. ಯೋಜನಾಧಿಕಾರಿ ಜಯಕರ ಶೆಟ್ಟಿ , ಹಾಸನದ ಎಪಿಎಂಸಿ ಅಧ್ಯಕ್ಷ ಮಂಜೇಗೌಡ, ನಿವೃತ್ತ ಉಪನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಕುಂತಳಾ, ನೆರಿಯ ಗ್ರಾಮದ ದೇವಸ್ಥಾನಗಳ ಭಜನ ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಊರ ಪರವೂರ ಭಕ್ತರು, ದಾನಿಗಳು, ಆಡಳಿತ ಸಮಿತಿಯ ಅಧ್ಯಕ್ಷ ಅಣಿಯೂರು ಕೃಷ್ಣಕುಮಾರ್‌ ಹಾಗೂ ಸಮಿತಿಯವರು ಭಾಗವಹಿಸಿದ್ದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ
ಅಣಿಯೂರು ಜಯದೇವ್‌ ಸ್ವಾಗತಿಸಿ, ಯೋಗರಾಜ ಗೌಡ ಪ್ರಸ್ತಾವಿಸಿದರು. ಕಕ್ಕಿಂಜೆ ಪೇಟೆಯಿಂದ ಪ್ರಥಮ ಶಿಲಾ ವಾಹನದ ಮೆರವಣಿಗೆ ನಡೆಯಿತು.

LEAVE A REPLY

Please enter your comment!
Please enter your name here