Home ಧಾರ್ಮಿಕ ಸುದ್ದಿ ಕಟೀಲಿನಲ್ಲಿ ನಾಗಮಂಡಲ: ಲಕ್ಷಾಂತರ ಭಕ್ತರು ಭಾಗಿ

ಕಟೀಲಿನಲ್ಲಿ ನಾಗಮಂಡಲ: ಲಕ್ಷಾಂತರ ಭಕ್ತರು ಭಾಗಿ

9722
0
SHARE

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗ ವಾಗಿ ಶನಿವಾರ ಸಂಭ್ರಮದ ನಾಗಮಂಡಲೋತ್ಸವ ನಡೆಯಿತು. ಸುಮಾರು 2ಲಕ್ಷಕ್ಕೂ ಹೆಚ್ಚು ಭಕ್ತರು ಭಾಗಿಯಾದರು.

ಸಂಜೆ ಆರು ಗಂಟೆಗೆ ದೇವಸ್ಥಾನದ ಒಳಭಾಗದ ನಾಗ ಸನ್ನಿಧಿಯಲ್ಲಿ ಹಾಲಿಟ್ಟು ಸೇವೆ ನಡೆದ ಬಳಿಕ ಭ್ರಾಮರೀವನದಲ್ಲಿ ಸಗ್ರಿ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಮದ್ದೂರು ಕೃಷ್ಣ ಪ್ರಸಾದ ವೈದ್ಯ ಬಳಗದವರಿಂದ ನಾಗಮಂಡಲೋತ್ಸವ ನಡೆಯಿತು.

ಸುಮಾರು 2 ಲಕ್ಷ ಮಂದಿ ಅನ್ನ ಪ್ರಸಾದ ಮತ್ತು ಫಲಾಹಾರ ಸ್ವೀಕರಿಸಿ ದರು. ನಾಗಮಂಡಲ ವೀಕ್ಷಣೆಗೆ ಬಸ್‌ ನಿಲ್ದಾಣ, ರಥಬೀದಿ, ಭೋಜನ ಶಾಲೆ ಮತ್ತಿತರ 10 ಕಡೆಗಳಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ದೇವರ ದರ್ಶನಕ್ಕೆ ಸರತಿ ಸಾಲು ಮಾಡಿದ್ದು ಎಲ್ಲ ಭಕ್ತರೂ ದೇವರ ದರ್ಶನ ಅವಕಾಶ ಪಡೆದು ಧನ್ಯರಾದರು.

ಉಚಿತ ಸಂಚಾರ ಸೇವೆ
ಕಟೀಲಿಗೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಬೆಳಗ್ಗಿನಿಂದ ರಾತ್ರಿ 11.30ರ ವರೆಗೆ ಕಟೀಲು ರೂಟಿನಲ್ಲಿ ಸಂಚರಿಸುವ ಬಸ್‌ಗಳು ಉಚಿತ ಸೇವೆ ಒದಗಿಸಿದವು. ಕಟೀಲಿನ ಸುಮಾರು 36 ಆಟೋರಿಕ್ಷಾಗಳು ಉಚಿತ ಪ್ರಯಾಣ ಒದಗಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಇದಲ್ಲದೆ ಉಡುಪಿ, ಪುತ್ತೂರು, ಮಂಗಳೂರು ಮೊದಲಾದ ಕಡೆಗಳಿಂದಲೂ ಭಕ್ತರು, ಸಂಘಸಂಸ್ಥೆಗಳು ಭಕ್ತರಿಗಾಗಿ ಉಚಿತ ವಾಹನ ವ್ಯವಸ್ಥೆ ಮಾಡಿದ್ದರು.

ಸುಮಾರು 16 ಕಡೆಗಳಲ್ಲಿ ಮಜ್ಜಿಗೆ ಹಾಗೂ ಪಾನಕದ ವ್ಯವಸ್ಥೆ ಮಾಡಲಾಗಿತ್ತು. 10 ಕೌಂಟರ್‌ನಲ್ಲಿ ಬಫೆ ಊಟದ ವ್ಯವಸ್ಥೆ ಮತ್ತು 500 ಟೇಬಲ್‌ನಲ್ಲಿ ನಿರಂತರ ಕುಳಿತು ಊಟ ಮಾಡುವ ರಾತ್ರಿ 1 ಗಂಟೆಯ ತನಕ ಅನ್ನದಾನ ವ್ಯವಸ್ಥೆ ನಡೆಯಿತು.
ದೇವಸ್ಥಾನದಲ್ಲಿ ಶನಿ ವಾರ ಬೆಳಗ್ಗೆ ಒಳಗಿನ ನಾಗಸನ್ನಿಧಿಯಲ್ಲಿ ಕಲಶಾ ಭಿಷೇಕ, ತಿಲಹೋಮ, ಕೂಷ್ಮಾಂಡ ಹೋಮ, ಪವ ಮಾನ ಹೋಮ, ಸರ್ಪತ್ರಯ ಮಂತ್ರ ಹೋಮ ಮೊದಲಾದ ಧಾರ್ಮಿಕ ವಿಧಿವಿಧಾನಗಳು ನಡೆದವು.

LEAVE A REPLY

Please enter your comment!
Please enter your name here