ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಹೋಗುವ ಹೊಸ ಸೇತುವೆಯ ಇಕ್ಕೆಲದಲ್ಲಿ ಶ್ರೀದೇವಿಯ ಪುರಾಣವನ್ನು ಸಾರುವ ತೈಲ ಚಿತ್ರಗಳನ್ನು ಅನಾವರಣಗೊಂಡಿವೆ.
ಸಾವಿರಾರು ವರ್ಷಗಳ ಹಿಂದೆ ಭೂಮಿ ಯಲ್ಲಿ ಭೀಕರ ಬರಗಾಲ ಅವರಿಸಿದ್ದ ಸಮಯದಲ್ಲಿ ಜಾಬಾಲಿ ಮುನಿಯು ಬರಗಾಲ ನಿವಾರಣೆಗಾಗಿ ಘೋರ ತಪಸ್ಸು ಕೈಗೊಂಡು ಇಂದ್ರನನ್ನು ಮೆಚ್ಚಿ ಸುತ್ತಾರೆ. ನಂದಿನಿಯನ್ನು ಭೂಮಿಗೆ ಕರೆದುಕೊಂಡು ಹೋಗಿ, ಹೋಮ-ಹವನ ಯಜ್ಞ ಯಾಗಾದಿಗಳನ್ನು ಮಾಡಿ ಮಳೆ ತರಿಸಿಕೊಳ್ಳುವಂತೆ ಜಾಬಾಲಿ ಮುನಿಗೆ ಇಂದ್ರ ತಿಳಿಸುತ್ತಾನೆ.
ನಂದಿನಿಯನ್ನು ಜಾಬಾಲಿ ಮುನಿಯು ಪರಿಪರಿಯಾಗಿ ಬೇಡಿ ಕೊಂಡರೂ ಭೂಮಿಗೆ ಬರುವುದಿಲ್ಲ ಎಂದಾಗ ನದಿಯಾಗಿ ಹರಿಯುವಂತೆ ಜಾಬಾಲಿ ಶಾಪ ನೀಡು ತ್ತಾರೆ.ಅನಂತರ ನಂದಿನಿಯೂ ದುಖೀ ತಳಾಗಿ ಜಾಬಾಲಿ ಮುನಿಯನ್ನು ಪ್ರಾರ್ಥಿಸುತ್ತಾಳೆ, ಆಗ ಮುನಿಯೂ ದುರ್ಗೆಯನ್ನು ಪ್ರಾರ್ಥಿಸಿ, ಅವಳಿಂದಲೇ ಪರಿಹಾರ ಸಿಗುವುದು ಎಂದು ಅಭಯ ನೀಡುತ್ತಾರೆ. ಮತ್ತೆ ಶ್ರೀದೇವಿಯ ಅಭಯದಂತೆ ನಂದಿನಿ ಮುಂದೆ ಕಟೀಲಿನಲ್ಲಿ ನದಿಯಾಗಿ ಹರಿಯುವು ದು, ಶ್ರೀದೇವಿಯು ಅರುಣಸುರನ ಅಟ್ಟಹಾಸವನ್ನು ನಿಲ್ಲಿಸಲು ದುಂಬಿಯಾಗಿ ಸಂಹರಿಸುವ ತೈಲ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ. ಮಂಗಳೂರಿನ ಶಾರದಾ ಆಟÕ…ìನ ಪದ್ಮನಾಭ ರಚಿಸಿದ್ದು ಹಲವು ವರ್ಷಗಳ ಕಾಲ ಕೆಡದಂತೆ ಉತ್ತಮ ಬಣ್ಣಗಾರಿಕೆಯಿಂದ ರಚಿಸಿದ್ದಾರೆ. 12 ತೈಲ ಚಿತ್ರಗಳನ್ನು ಕಾಣಬಹುದಾಗಿದೆ.