ಕಟೀಲು : ದೈವ ಸ್ಥಾನಗಳು ಕಾರಣಿಕವಾಗಿದ್ದು ನಮ್ಮ ಸಂಸ್ಕೃತಿಯ ಪ್ರತೀಕದಂತಿದ್ದು, ಭಕ್ತರ ಸಂಕಷ್ಟಕ್ಕೆ ಸದಾ ಸ್ಪಂದಿಸುವ ಶಕ್ತಿಕೇಂದ್ರಗಳಾಗಿವೆ ಎಂದು ಚಲನಚಿತ್ರ ನಟ ಗಿರೀಶ್ ಶೆಟ್ಟಿ ಅಜಾರು ಹೇಳಿದರು.
ಡಿ. 27 ರಂದು ಕಟೀಲು ಅಜಾರು ದೂಮಾವತಿ ದೈವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ಪಾಕಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಟೀಲು ಗ್ರಾ.ಪಂ.ನ ಉಪಾಧ್ಯಕ್ಷ ಕಿರಣ್ ಶೆಟ್ಟಿ ಮಾತನಾಡಿ, ಇಲ್ಲಿನ ದೈವಸ್ಥಾನಕ್ಕೆ 150 ಮೀ. ಸಂಪರ್ಕ ರಸ್ತೆಗೆ ಕಾಂಕ್ರೀಟ್ ಹಾಕಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಅಜಾರು ನಾಗರಾಜ ರಾಯರು, ಅಜಾರು ಗುತ್ತು ವಿಜಯ ಶೆಟ್ಟಿ ಅಜಾರು,
ಶಂಕರ ಶೆಟ್ಟಿ, ಗ್ರಾ.ಪಂ. ಸದಸ್ಯ ರಮಾನಂದ ಪೂಜಾರಿ, ಕಟೀಲು ಕಾಲೇಜಿನ ಉಪನ್ಯಾಸಕ ಜಯರಾಮ ರೈ ಉಪಸ್ಥಿತರಿದ್ದರು. ದಯಾನಂದ ಅಜಾರು ನಿರೂಪಿಸಿದರು. ಶೇಖರ್ ಅಜಾರು ವಂದಿಸಿದರು.