Home ಧಾರ್ಮಿಕ ಸುದ್ದಿ ಕಟೀಲು: ನಾಗ ಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಟೀಲು: ನಾಗ ಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

1095
0
SHARE
ಕಟೀಲು ಭ್ರಾಮರೀ ವನದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕಟೀಲು : ಇಲ್ಲಿನ ಶ್ರೀ ದುರ್ಗಾ ಪರಮೆಶ್ವರೀ ದೇವಸ್ಥಾನದ ಮೂಲ ಕ್ಷೇತ್ರ ಭಾಮರೀ ವನದಲ್ಲಿ ಎರ್ಮಾಳು ಪೂಲ ರಾಧಾ ವಿಟ್ಠಲ ಶೆಟ್ಟಿ ಮತ್ತು ಮಕ್ಕಳ ಸೇವಾ ರೂಪವಾಗಿ ಮಾರ್ಚ್‌ 3 ರಂದು ನಡೆಯುವ ಅಷ್ಟಪವಿತ್ರ ನಾಗ ಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಟೀಲು ಭ್ರಾಮರೀ ವನದಲ್ಲಿ ಫೆ. 7 ರಂದು ನಡೆಯಿತು.

ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ದೇಗುಲದ ಕೃಷ್ಣರಾಜ ತಂತ್ರಿ, ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್‌ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕುಮಾರ್‌ ಆಸ್ರಣ್ಣ, ವೇದವ್ಯಾಸ ಉಡುಪ, ಸತೀಶ್‌ ಶೆಟ್ಟಿ ಎರ್ಮಾಳು, ಉದಯ ಕೆ. ಶೆಟ್ಟಿ ಎರ್ಮಾಳು, ಸುನಂದಾ ಶೆಟ್ಟಿ, ಪುಷ್ಪಾ ಶೆಟ್ಟಿ, ಸರಸ್ವತಿ ಶೆಟ್ಟಿ, ವಿಶ್ವನಾಥ ಶೆಟ್ಟಿ ಐಕಳ, ಸುಧೀರ್‌ ಶೆಟ್ಟಿ ಕೊಡೆತ್ತೂರು ಗುತ್ತು, ಕದ್ರಿ ನವನೀತ ಶೆಟ್ಟಿ, ಪ್ರಸನ್ನ ಎಲ್‌. ಶೆಟ್ಟಿ ಅತ್ತೂರಗುತ್ತು, ಶಂಕರ ಶೆಟ್ಟಿ ಮೂಡ್ರಗುತ್ತು, ಗಿರೀಶ್‌ ಶೆಟ್ಟಿ ಕುಡ್ತಿಮಾರಗುತ್ತು, ಚರಣ್‌
ಶೆಟ್ಟಿ, ಕೊಜಪಾಡಿ ಬಾಳಿಗೆ, ಶೇಖರ ಮಾಡ ಮಾಡರ ಮನೆ, ಪ್ರವೀಣ್‌ ಮಾಡ ಮಾಡರ ಮನೆ, ಶ್ರೀಧರ ಶೆಟ್ಟಿ ಮಾಗಂದಡಿ, ರಘುನಾಥ ಶೆಟ್ಟಿ ಮೂಡ್ರಗುತ್ತು, ರಾಜೇಶ್‌ ಶೆಟ್ಟಿ ಕೆಳಗಿನ ಮನೆ, ದೇವಸ್ಥಾನದ ಪ್ರಬಂಧಕ ತಾರಾನಾಥ ಶೆಟ್ಟಿ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here