Home ಧಾರ್ಮಿಕ ಸುದ್ದಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ ಅಷ್ಟಬಂಧ ಪ್ರತಿಷ್ಠಾ ತೋರಣ ಮುಹೂರ್ತ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ ಅಷ್ಟಬಂಧ ಪ್ರತಿಷ್ಠಾ ತೋರಣ ಮುಹೂರ್ತ

1816
0
SHARE

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಜ. 25ರಂದು ನಡೆಯಲಿರುವ ಅಷ್ಟಬಂಧ ಹಾಗೂ ಜ. 28ರಂದು ನಡೆಯಲಿರುವ ಕಲಶಾಭಿಷೇಕದ ಪೂರ್ವಭಾವಿಯಾಗಿ ಸಾಮೂಹಿಕ ಪ್ರಾರ್ಥನೆ, ತೋರಣ ಸ್ಥಾಪನೆ ಮುಹೂರ್ತ, ಕದಿರೆ ಮರದಿಂದ ಮಾಡಿದ ಅರಣಿಯಿಂದ ಅಶ್ವತ್ಥದ ಕೆತ್ತೆಯನ್ನಿಟ್ಟು ಮಥನದ ಮೂಲಕ ಅಗ್ನಿಸೃಷ್ಟಿಯನ್ನು ಮಾಡಲಾಯಿತು.

ಶ್ರೀ ದೇವರ ಮುಖರಂಗ ಮತ್ತು ಬಲಿ ಮೂರ್ತಿಗೆ ಅಗ್ನಿ ಉತ್ಥಾರಣ ಮಾಡಲಾಯಿತು.ಅರಣಿ ಮಥನ, ನೂರೆಂಟು ತೆಂಗಿನಕಾಯಿ ಗಣಯಾಗ ವೇದವ್ಯಾಸ ತಂತ್ರಿ, ಕೃಷ್ಣರಾಜ ತಂತ್ರಿಗಳ ಸಹಯೋಗ ದಲ್ಲಿ ನಡೆಯಿತು.

ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಕೊಡೆತ್ತೂರುಗುತ್ತು ಸನತ್‌ ಕುಮಾರ ಶೆಟ್ಟಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಅತ್ತೂರುಬೈಲು ವೆಂಕಟರಾಜ ಉಡುಪ, ವಾಸುದೇವ ಶಿಬರಾಯ, ವಿವಿಧ ಸೇವಾ ಕರ್ತರು, ಅತ್ತೂರು ಕೊಡೆತ್ತೂರು ಗ್ರಾಮಸ್ಥರು ಉಪಸ್ಥಿತರಿದ್ದರು.

ಅಂಕುರಾರೋಪಣ, ರಾಕ್ಷೋಘ್ನಹೋಮಗಳ ಬಳಿಕ ನಾಗ, ಬ್ರಹ್ಮ ಸನ್ನಿಧಿಗಳಲ್ಲಿ ವಾಸ್ತು ಪೂಜೆ ನಡೆಯಿತು.

LEAVE A REPLY

Please enter your comment!
Please enter your name here