Home ಧಾರ್ಮಿಕ ಸುದ್ದಿ ಕಟೀಲು ದೇವ ಸ್ಥಾನ ಬ್ರಹ್ಮಕಲಶೋತ್ಸವ ಕಚೇರಿ ಉದ್ಘಾಟನೆ

ಕಟೀಲು ದೇವ ಸ್ಥಾನ ಬ್ರಹ್ಮಕಲಶೋತ್ಸವ ಕಚೇರಿ ಉದ್ಘಾಟನೆ

70
0
SHARE

ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 2020ರ ಜನವರಿ 30ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲ ಸೇವೆ ನಡೆಯಲಿದೆ ಎಂದು ದೇವ ಸ್ಥಾ ನದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.

ಮಾ. 14ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವದ ಕಚೇರಿ ಉದ್ಘಾ ಟನೆ ಸಮಾ ರಂಭ ದಲ್ಲಿ ಮಾತ ನಾಡಿ, ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಅನೇಕ ಯೋಜನೆಯ ಬಗ್ಗೆ ಸಂಕಲ್ಪಿಸಿದ್ದು, ಚಿನ್ನದ ದ್ವಜಸ್ತಂಭ ನಿರ್ಮಾಣ, 3,000 ಭಕ್ತರು ಕುಳಿತು ಅನ್ನಪ್ರಸಾದ ಸ್ವೀಕರಿಸುವಂತಹ ನೂತನ ಭೋಜನ ಶಾಲೆ, ದೇವ ಸ್ಥಾ ನ ದಲ್ಲಿ ವರ್ಷಕ್ಕೆ ನೂರಾರು ಸರಳ ವಿವಾಹ ನಡೆಯುದರಿಂದ ಲಕ್ಷೀ ಸ್ವಯಂವರ ಕಲ್ಯಾಣ ಮಂಟಪ, ಪಾರ್ಕಿಂಗ್‌ ವ್ಯವಸ್ಥೆ ಸಹಿತ ಇನ್ನಿ ತರ ವ್ಯವಸ್ಥೆ ಗಳು ಸುಮಾರು 45 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಭಕ್ತರ ಸಹ ಕಾ ರ ಕ್ಕೆ ದೇವ ಸ್ಥಾ ನ ದಲ್ಲಿ ಕಚೇರಿಯನ್ನು ತೆರೆಯಲಾಗಿದೆ ಎಂದರು. ದೇವಸ್ಥಾನದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿಯ ಅಧ್ಯಕ್ಷ, ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರುಗುತ್ತು ದೀಪ ಬೆಳಗಿಸಿ ಕೌಂಟರ್‌ ಉದ್ಘಾಟಿಸಿದರು. ಈ ಸಂದ ರ್ಭ ಬ್ರಹ್ಮಕಲಶೋತ್ಸವ ಕಾಣಿಕೆ ಹುಂಡಿಯನ್ನು ಪ್ರಾರಂಭಿಸಲಾಯಿತು.

ಲಕ್ಷೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್‌ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕುಮಾರ ಆಸ್ರಣ್ಣ, ಸುಧೀರ್‌ ಶೆಟ್ಟಿ ಕೊಡೆತ್ತೂರು ಗುತ್ತು, ಹರಿಕೃಷ್ಣ ಪುನರೂರು, ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯತ್‌ ಸದಸ್ಯ ಸುಕುಮಾರ್‌ ಸನೀಲ್‌, ಕಟೀಲು ಪಂಚಾಯತ್‌ ಉಪಾಧ್ಯಕ್ಷೆ ಕಿರಣ್‌ ಕುಮಾರ್‌ ಶೆಟ್ಟಿ, ಕರುಣಾಕರ ಶೆಟ್ಟಿ ಮರವೂರು, ಸಚ್ಚಿದಾನಂದ ಶೆಟ್ಟಿ ಬೋಂಡಾಲ, ಮಹಾಬಲ ಶೆಟ್ಟಿ ಐಕಳ, ಶೇಖರ ಶೆಟ್ಟಿ ಪೆರ್ಮುದೆ, ಭುಜಂಗ ಶೆಟ್ಟಿ ಪೆರ್ಮುದೆ, ದೊಡ್ಡಯ್ಯ ಮೂಲ್ಯ ಲೋಕಯ್ಯ ಸಾಲ್ಯಾನ್‌, ಜೀವನ್‌ ಶೆಟ್ಟಿ ಮೂಲ್ಕಿ, ಗಿರೀಶ್‌ ಎಂ. ಶೆಟ್ಟಿ ಕಟೀಲು, ಉಮೇಶ್‌ ರಾವ್‌ ಎಕ್ಕಾರು ಪಿ. ಸತೀಶ್‌ ರಾವ್‌, ಯಾದವ ಕೋಟ್ಯಾನ್‌ ಪೆರ್ಮುದೆ, ಮಧುಕರ ಅಮೀನ್‌, ಸುಬ್ರಮಣ್ಯ ಆಚಾರ್‌ ಕೋರಿಯರ್‌, ಈಶ್ವರ್‌ ಕಟೀಲು , ತಿಮ್ಮಪ್ಪ ಕೋಟ್ಯಾನ್‌, ನಿಲಯ್ಯ ಕೋಟ್ಯಾನ್‌, ಪ್ರಥ್ವೀರಾಜ ಆಚಾರ್ಯ ಅನುಗ್ರಹ, ಜೀವನ್‌ ಶೆಟ್ಟಿ, ಭುವನಾಭಿರಾಮ ಉಡುಪ, ಬಿ.ಡಿ. ರಾಮಚಂದ್ರ ಆಚಾರ್ಯ, ರಾಘವೇಂದ್ರ ಆಚಾರ್ಯ ಬಜಪೆ, ರವಿರಾಜ ಆಚಾರ್ಯ ಬಜಪೆ, ಧರ್ಮದರ್ಶಿ ಹರೀಶ್‌ ಪೂಜಾರಿ ಉಲ್ಲಂಜೆ, ಪುರುಷೋತ್ತಮ ಶೆಟ್ಟಿ ಕೊಡೆತ್ತೂರು, ಲಕ್ಷೀಪ್ರಕಾಶ್‌ ಶೆಟ್ಟಿ, ಸುರೇಶ್‌ ಶೆಟ್ಟಿ ಕೊಡೆತ್ತೂರು, ಪ್ರಸಾದ್‌ ಆಚಾರ್ಯ ಬಜಪೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here