Home ಧಾರ್ಮಿಕ ಸುದ್ದಿ ಕಟೀಲು: ಕೋಟಿ ಜಪ ಯಜ್ಞಕ್ಕೆ ಚಾಲನೆ

ಕಟೀಲು: ಕೋಟಿ ಜಪ ಯಜ್ಞಕ್ಕೆ ಚಾಲನೆ

2238
0
SHARE

ಕಟೀಲು: ಕಟೀಲು ದುರ್ಗೆಯ ಬ್ರಹಕಲಶೋತ್ಸವ ಹಾಗೂ ಕೋಟಿ ಜಪ ಯಜ್ಞದಲ್ಲಿ ಭಾಗವಹಿಸಿ ಕೃತಾರ್ಥರಾಗೋಣ ಎಂದು ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.

ಅವರು ರವಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಶೋತ್ಸವದ ಪೂರ್ವಾಭಾವಿಯಾಗಿ ಕೋಟಿ ಜಪ ಯಜ್ಞದ ಮಂತ್ರ ದೀಕ್ಷೆ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತ
ನಾಡಿ, ಜಪ ಯಜ್ಞದ ಮೂಲಕ ದುರ್ಗೆಯನ್ನು ಸುಲಭದಲ್ಲಿ ಮೆಚ್ಚಿಸಬಹುದು ಎಂದು ಹೇಳಿ ದರು. ಶ್ರೀಹರಿನಾರಾಯಣ ದಾಸ ಆಸ್ರಣ್ಣ ಪ್ರಸ್ತಾನೆಗೈದರು. ಸ್ಕಂದ ಭಟ್‌ ಕಡಂದಲೆ ಮಂತ್ರ ದೀಕ್ಷೆಯ ವಿಧಿವಿಧಾನ ತಿಳಿಸಿ 108 ಸಲ ಮಂತ್ರ ಬೋಧಿಸಿದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರುಗುತ್ತು, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ , ವೆಂಕಟರಮಣ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಸುಧೀರ್‌ ಶೆಟ್ಟಿ ಕೊಡೆತ್ತೂರುಗುತ್ತು, ಬಿಪಿನ್‌ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಈಶ್ವರ ಕಟೀಲು, ಮಧುಕರ ಅಮೀನ್‌, ಕಸ್ತೂರಿ ಪಂಜ, ಶುಭಲತಾ ಶೆಟ್ಟಿ ,ಶೆಡ್ಡೆ ಮಂಜುನಾಥ ಭಂಡಾರಿ, ಭುವನಾ ಭಿರಾಮ ಉಡುಪ, ಸುಬ್ರಹ್ಮಣ್ಯ ಭಟ್‌, ಪ್ರದ್ಯುಮ್ನ ರಾವ್‌, ಭಾಸ್ಕರ ದೇವಸ್ಯ, ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್‌ ಶೆಟ್ಟಿ, ಸುದರ್ಶನ ಮೂಡಬಿದಿರೆ ಉಪಸ್ಥಿತರಿದ್ದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಬ್ರಹ್ಮಕಶೋತ್ಸವಕ್ಕೆ ಕೇಂದ್ರದ ನಾಯಕರು ಹಾಗೂ ಮುಖ್ಯಮಂತ್ರಿಗಳು ಬರಲಿದ್ದಾರೆ.
– ನಳಿನ್‌ ಕುಮಾರ್‌ ಕಟೀಲು, ದ.ಕ. ಸಂಸದ

LEAVE A REPLY

Please enter your comment!
Please enter your name here