Home ಧಾರ್ಮಿಕ ಸುದ್ದಿ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ ಇಂದು ರಾತ್ರಿ ಉತ್ಸವ, ನಾಳೆ ಹಗಲು ಉತ್ಸವ, ಅನ್ನಸಂತರ್ಪಣೆ

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ ಇಂದು ರಾತ್ರಿ ಉತ್ಸವ, ನಾಳೆ ಹಗಲು ಉತ್ಸವ, ಅನ್ನಸಂತರ್ಪಣೆ

670
0
SHARE

ಕಟಪಾಡಿ: ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಜಾತ್ರಾ ಮಹೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪರವೂರು ರಾಕೇಶ್‌ ತಂತ್ರಿ ಅವರ ನೇತೃತ್ವದಲ್ಲಿ , ಶ್ರೀಕ್ಷೇತ್ರದ ಪ್ರಧಾನ ಅರ್ಚಕ ದೇವದಾಸ ಶಾಂತಿ ಅವರ ಪೌರೋಹಿತ್ಯದಲ್ಲಿ ಫೆ.17ರ ವರೆಗೆ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಆ ಪ್ರಯುಕ್ತ ಫೆ.15ಕ್ಕೆ ಮಹಾಗಣಪತಿ ಹೋಮ, ಶ್ರೀ ವಿಶ್ವನಾಥ ದೇವರಿಗೆ ಶತಸೀಯಾಳಾಭಿಷೇಕ.

ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಮಹಾಪೂಜೆ, ಭೂತಬಲಿ, ರಾತ್ರಿ ರಥೋತ್ಸವ, ಕೆರೆದೀಪೋತ್ಸವ, ಕಟ್ಟೆಪೂಜೆ ಜರಗಲಿದೆ. ಫೆ.16ಕ್ಕೆ ಮಹಾಗಣಪತಿ ಹೋಮ, ತುಲಾಭಾರ ಸೇವೆ, ಹಗಲು ಉತ್ಸವ- ರಥೋತ್ಸವ, ಅನ್ನಸಂತರ್ಪಣೆ, ಸಂಜೆ ಪಲ್ಲಕ್ಕಿ ಉತ್ಸವ, ಪೇಟೆ ಸವಾರಿ, ಮೃಗಬೇಟೆ, ಶಯನೋತ್ಸವ, ಕವಾಟ ಬಂಧನ ನೆರವೇರಲಿದ್ದು, ಫೆ.17ಕ್ಕೆ ಕಲ್ಕುಡ ಕೋಲ ನಡೆಯಲಿದೆ.

LEAVE A REPLY

Please enter your comment!
Please enter your name here