ಕಟಪಾಡಿ: ಸೋದೆ ಮಠದ ಶ್ರೀ ವಾದಿರಾಜ ಸ್ವಾಮಿಗಳಿಂದ ಪುರಾಣಿಕ ಕುಟುಂಬಸ್ಥರಿಗೆ ಪ್ರದತ್ತವಾದ ಶ್ರೀ ವೇಣುಗೋಪಾಲಕೃಷ್ಣ ದೇವರ ವಿಗ್ರಹವನ್ನು ನೂತನ ಗುಡಿಯಲ್ಲಿ ಪ್ರತಿಷ್ಠಾಪನೆ ನೆರವೇರಿತು.
ಜೊತೆಗೆ ಶ್ರೀ ಸೋದೆ ಮಠದ ಶ್ರೀ ವಿಶ್ವೇಂದ್ರತೀರ್ಥರು ಕೊಡಮಾಡಿದ ಬೆಳ್ಳಿಯ ವಾದಿರಾಜರ ವೃಂದಾವನವೂ ಇಲ್ಲಿ ಪೂಜಿಸಲ್ಪಡಲಿದ್ದು, ಸುಸಜ್ಜಿತ ಅರ್ಚಕ ಗೃಹ ನಿರ್ಮಿಸಲಾಗಿದೆ.
ವರ್ಷಂಪ್ರತಿ ಪ್ರತಿಷ್ಠಾ ದಿನದ ಆಚರಣೆ, ಮಹಾಭಿಷೇಕ, ಶ್ರೀವಾದಿರಾಜರ ಆರಾಧನೆಯಂತಹ ವಿಶೇಷ ಕಾರ್ಯಕ್ರಮಗಳು ಜರಗಲಿವೆ. ಮುಂದಿನ ದಿನಗಳಲ್ಲಿ ದೇವರ ಪೂಜೆಗಾಗಿ ಪ್ರೋ|ಚೊಕ್ಕಾಡಿ ಶ್ರೀನಿವಾಸ ಪುರಾಣಿಕರ ನೇತೃತ್ವದಲ್ಲಿ ಶ್ರೀ ವೇಣುಗೋಪಾಲಕೃಷ್ಣ ಸೇವಾ ಪ್ರತಿಷ್ಠಾನ ಸಮಿತಿ ರಚಿಸಿ ಶಾಶ್ವತ ನಿಧಿಯನ್ನು ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ ಎಂದು ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ಪ್ರೊ| ಶ್ರೀನಿವಾಸ ಪುರಾಣಿಕ್ ತಿಳಿಸಿರುತ್ತಾರೆ.