Home ಧಾರ್ಮಿಕ ಕಾರ್ಯಕ್ರಮ ನೂತನ ಮಹಾವಿಷ್ಣುಮೂರ್ತಿ ವಿಗ್ರಹ ಆಗಮನ

ನೂತನ ಮಹಾವಿಷ್ಣುಮೂರ್ತಿ ವಿಗ್ರಹ ಆಗಮನ

ಕೇದಾರ್‌ ಹರಿಹರ ಪುಣ್ಯಕ್ಷೇತ್ರ

356
0
SHARE

ಕಟಪಾಡಿ: ಉದ್ಯಾವರ ಕೇದಾರ್‌ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಶ್ರೀ ಮಹಾವಿಷ್ಣುಮೂರ್ತಿ ಶ್ರೀ ಹರಿಹರ ಪುಣ್ಯಕ್ಷೇತ್ರಕ್ಕೆ ಮಹಾವಿಷ್ಣುಮೂರ್ತಿ ದೇವರ ವಿಗ್ರಹವನ್ನು ಶುಕ್ರವಾರ ಸಂಜೆ ಕ್ಷೇತ್ರಕ್ಕೆ ಸಮರ್ಪಿಸಲಾಯಿತು.

ನೂತನ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ ಸಮರ್ಪಣಾ ಪೂರ್ವಕ ಅಷ್ಟಬಂಧ ಪುನಃ ಪ್ರತಿಷ್ಠೆ-ಬ್ರಹ್ಮಕಲಶೋತ್ಸವ, ರಂಗಪೂಜಾದಿ ಬಲಿ ಉತ್ಸವಕ್ಕೆ ಸಜ್ಜುಗೊಂಡ ಪುಣ್ಯಕ್ಷೇತ್ರಕ್ಕೆ ಭಜನಾದಿಗಳಿಂದ ಕೂಡಿದ ಭವ್ಯ ಮೆರವಣಿಗೆಯಲ್ಲಿ ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಈ ವಿಗ್ರಹವನ್ನು ತಂದು ಒಪ್ಪಿಸಲಾಯಿತು.

ಸುಮಾರು 1200 ವರ್ಷಗಳಷ್ಟು ಪೂರ್ವದಲ್ಲಿ ನಿರ್ಮಾಣ ಗೊಂಡಿರುವ ಐತಿಹ್ಯವುಳ್ಳ ಜೀರ್ಣಾವಸ್ಥೆಯಲ್ಲಿರುವ ದೇಗುಲದಲ್ಲಿ ಮೂಲಸ್ಥಾನ ಮಹಾವಿಷ್ಣು ಪ್ರತಿಮೆ ಭಗ್ನಗೊಂಡಿತ್ತು. ಇದೀಗ ನೂತನ ಮಹಾವಿಷ್ಣುವಿನ ಮೂರ್ತಿ ಪುನಃಪ್ರತಿಷ್ಠೆಯೊಂದಿಗೆ ಬ್ರಹ್ಮಕಲಶ ನಡೆಯಲಿದೆ.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರವೀಣ ಶೆಟ್ಟಿ ಕೊರಂಗ್ರಪಾಡಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶೇಖರ ಕೆ. ಕೋಟ್ಯಾನ್‌, ಕ್ಷೇತ್ರದ ತಂತ್ರಿ ಕೊರಂಗ್ರಪಾಡಿ ವೇ|ಮೂ| ಕೆ.ಎಸ್‌. ಕೃಷ್ಣಮೂರ್ತಿತಂತ್ರಿ, ಪ್ರಧಾನ ಅರ್ಚಕ ನರಸಿಂಹ ಉಪಾಧ್ಯ, ಸಿದ್ಧಿ ವಿನಾಯಕ ದೇಗುಲದ ಅರ್ಚಕ ರಂಗನಾಥ ಭಟ್, ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here