Home ಧಾರ್ಮಿಕ ಕಾರ್ಯಕ್ರಮ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ‌, ಶಿಲ್ಪಿಗಳಿಗೆ ಸಮ್ಮಾನ, ಗೌರವಾರ್ಪಣೆ

ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ‌, ಶಿಲ್ಪಿಗಳಿಗೆ ಸಮ್ಮಾನ, ಗೌರವಾರ್ಪಣೆ

ಕೇದಾರ್‌ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ, ಶ್ರೀ ಮಹಾವಿಷ್ಣುಮೂರ್ತಿ ದೇಗುಲ

858
0
SHARE

ಕಟಪಾಡಿ: ಕೇದಾರ್‌ ಜನತೆಯ ಮೌಲ್ಯಯುತ ಭಕ್ತಿ-ಶ್ರದ್ಧೆಯ ತೊಡಗಿಸಿಕೊಳ್ಳುವಿಕೆಯಿಂದ ಕೇದಾರ್‌ ಶ್ರೀ ಹರಿಹರ ಕ್ಷೇತ್ರದಲ್ಲಿ ಭವ್ಯವಾದ ದೇಗುಲ ಎದ್ದು ನಿಲ್ಲಲು ಸಾಧ್ಯವಾಗಿದೆ. ಪವಿತ್ರ ಕ್ಷೇತ್ರವಾಗಿ ಪ್ರಸಿದ್ಧಿ ಪಡೆಯಲಿರುವ ಈ ಪುಣ್ಯ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರದ ಅನುಕೂಲಕ್ಕಾಗಿ ಸರಕಾರದ ಅನುದಾನಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುವ ಭರವಸೆಯನ್ನು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ನೀಡಿದರು.

ಅವರು ರವಿವಾರ ಉದ್ಯಾವರ ಕೇದಾರ್‌ನ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ, ಶ್ರೀ ಮಹಾವಿಷ್ಣುಮೂರ್ತಿ ಶ್ರೀ ಹರಿಹರ ಪುಣ್ಯಕ್ಷೇತ್ರದಲ್ಲಿ ನಡೆದ ಶಿಲ್ಪಿಗಳಿಗೆ ಸಮ್ಮಾನ, ದಾನಿಗಳು-ಸೇವಾರ್ಥಿಗಳು-ಪ್ರಾಯೋಜಕರುಗಳಿಗೆ ಗೌರವಾರ್ಪಣೆ ನೆರವೇರಿಸಿ ಮಾತನಾಡಿದರು.

ದೇವರ ಅನುಗ್ರಹವಿದ್ದಲ್ಲಿ ಏನು ಬೇಕಾದರೂ ಕೈಗೂಡಬಹುದು ಎಂಬುದಕ್ಕೆ ಅತ್ಯಲ್ಪ ಅವಧಿಯಲ್ಲಿ ನಿರ್ಮಾಣಗೊಂಡ ಜಿಲ್ಲೆಯಲ್ಲಿಯೇ ಅತಿ ವಿರಳ ಎಂದೇ ಗುರುತಿಸಬಹುದಾದ ಶ್ರೀ ಹರಿಹರ ದೇಗುಲಗಳೇ ಸಾಕ್ಷಿಯಾಗಿವೆೆ. ಇದಕ್ಕಾಗಿ ತೊಡಗಿಸಿಕೊಂಡ ಭಕ್ತಾದಿಗಳೆಲ್ಲರೂ ದೇವರಿಗೆ ಸೇವೆಯನ್ನು ಸಲ್ಲಿಸುವ ಮೂಲಕ ಶಾಶ್ವತವಾಗಿ ಪುಣ್ಯಾತ್ಮರು ಎನಿಸಿಕೊಳ್ಳುತ್ತಿದ್ದಾರೆ.

ಧಾರ್ಮಿಕ ಉಪನ್ಯಾಸದಡಿ ಶ್ರೀ ಕ್ಷೇತ್ರದ ತಂತ್ರಿ ಕೊರಂಗ್ರಪಾಡಿ ವೇ|ಮೂ| ಕೆ.ಎಸ್‌. ಕೃಷ್ಣಮೂರ್ತಿ ತಂತ್ರಿ ಮಾತನಾಡಿ, ಭಕ್ತಿ ಇದ್ದಲ್ಲಿ ಭಗವಂತನ ಸನ್ನಿಧಾನ ಇರುತ್ತದೆ. ಭಗವಂತ ಇದ್ದಲ್ಲಿ ಸುಭಿಕ್ಷೆ ನೆಲೆಸುತ್ತದೆ. ಜನ್ಮ ನೀಡಿದ ತಾಯಿ ಮತ್ತು ಜನ್ಮಭೂಮಿಯ ಮಣ್ಣಿನ ಋಣವನ್ನು ತೀರಿಸಬೇಕಿದೆ. ಇದು ಈ ಗ್ರಾಮದ ಸುಯೋಗವಾಗಿದೆ. ಭಗವಂತನ ಪುನರುತ್ಥಾನ ಇಲ್ಲಾಗಿದೆ ಎಂದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಕೊರಂಗ್ರಪಾಡಿ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಶಿಲಾಮಯ ದೇಗುಲದ್ವಯಗಳ ನಿರ್ಮಾಣದ ಶಿಲಾ ಶಿಲ್ಪಿ ಎನ್‌. ಅಶೋಕ್‌ ಕಾರ್ಕಳ, ದಾರು ಶಿಲ್ಪವನ್ನು ನಿರ್ಮಿಸಿದ ಶಿಲ್ಪಿ ಯು.ಬಿ. ಶ್ಯಾಮರಾಯ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ದಾನಿಗಳನ್ನು, ವಿವಿಧ ಸೇವಾರ್ಥಿಗಳನ್ನು, ವಿವಿಧ ಕಾರ್ಯಕ್ರಮಗಳ ಪ್ರಾಯೋಜಕ ರನ್ನು ಗೌರವಿಸಲಾಯಿತು.

ಈ ಸಂದರ್ಭ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬಿ. ವಿಜಯ ಬಲ್ಲಾಳ್‌, ಸಮಾಜ ಸೇವಕ ಸುರೇಶ್‌ ಶೆಟ್ಟಿ ಗುರ್ಮೆ, ಉದ್ಯಮಿ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಮಾತನಾಡಿ, ಉದ್ಯಾವರ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಗಂಧಿ ಶೇಖರ್‌ ಕೋಟ್ಯಾನ್‌, ಉದ್ಯಮಿ ವಿಶ್ವನಾಥ ಪಂದುಬೆಟ್ಟು , ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶೇಖರ ಕೆ. ಕೋಟ್ಯಾನ್‌, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯಾ ಆಚಾರ್ಯ, ಗೌರವಾಧ್ಯಕ್ಷ ವಾದಿರಾಜ ಆಚಾರ್ಯ ಮೇಲ್ಮಠ, ಗೌ| ಸಲಹೆಗಾರ ಉದ್ಯಾವರ ನಾಗೇಶ್‌ ಕುಮಾರ್‌ ವೇದಿಕೆಯಲ್ಲಿದ್ದರು.

ವ್ಯವಸ್ಥಾಪನ ಸಮಿತಿಯ ಸದಸ್ಯ ದಿವಾಕರ ಬೊಳ್ಜೆ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿಯ ಕೋಶಾಧಿಕಾರಿ ಯು. ಸುಧಾಕರ್‌ ಕುಮಾರ್‌ ಪ್ರಸ್ತಾವನೆ ಗೈದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸುರೇಶ್‌ ಸಿ. ಸಾಲ್ಯಾನ್‌ ವಂದಿಸಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here