Home ಧಾರ್ಮಿಕ ಕಾರ್ಯಕ್ರಮ ಮಹಾವಿಷ್ಣುಮೂರ್ತಿ ದೇವರ ರಂಗಪೂಜೆ, ಬಲಿ ಉತ್ಸವ

ಮಹಾವಿಷ್ಣುಮೂರ್ತಿ ದೇವರ ರಂಗಪೂಜೆ, ಬಲಿ ಉತ್ಸವ

1363
0
SHARE

ಕಟಪಾಡಿ: ಜೀರ್ಣೋದ್ಧಾರ ಗೊಂಡು ನೂತನ ಶಿಲಾಮಯ ಗರ್ಭಗುಡಿ, ತೀರ್ಥಮಂಟಪದೊಂದಿಗೆ ಕಂಗೊಳಿಸುತ್ತಿರುವ ಪುರಾತನ-ಇತಿಹಾಸ ಪ್ರಸಿದ್ಧ ಉದ್ಯಾವರ ಕೇದಾರ್‌ ಶ್ರೀ ಹರಿಹರ ಕ್ಷೇತ್ರದಲ್ಲಿ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾ ವಿಷ್ಣುಮೂರ್ತಿ ದೇವರಿಗೆ ಆರಾಧನಾ ರಂಗಪೂಜೆ, ಬಲಿ ಉತ್ಸವ, ರಾತ್ರಿ ಪೂಜೆ ನಡೆಯಿತು.

ದೇವಸ್ಥಾನದ ತಂತ್ರಿ ವೇ|ಮೂ|ಕೆ.ಎಸ್‌. ಕೃಷ್ಣಮೂರ್ತಿ ತಂತ್ರಿ, ಪ್ರಧಾನ ಅರ್ಚಕ ನರಸಿಂಹ ಉಪಾಧ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರವೀಣ ಶೆಟ್ಟಿ ಕೊರಂಗ್ರಪಾಡಿ, ಪ್ರಧಾನ ಕಾರ್ಯದರ್ಶಿ ವಿಜಯಾ ಆಚಾರ್ಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶೇಖರ ಕೆ.ಕೋಟ್ಯಾನ್‌, ಕಾರ್ಯದರ್ಶಿ ಯು.ಆರ್‌.ಚಂದ್ರಶೇಖರ್‌, ಕೋಶಾಧಿಕಾರಿ ಸುಧಾಕರ್‌ ಕುಮಾರ್‌, ಅರ್ಚಕ ಸುಧೀಂದ್ರ ಉಪಾಧ್ಯ, ಸದಸ್ಯರಾದ ಶಾಂತಾ ಎಸ್‌. ಪೂಜಾರಿ, ಗೀತಾ ಜೆ., ಸತೀಶ್‌ ಡಿ. ಸಾಲ್ಯಾನ್‌, ಆನಂದ ಕೊರಂಗ್ರಪಾಡಿ, ದಿವಾಕರ್‌ ಬೊಳ್ಜೆ, ಜೀರ್ಣೋದ್ಧಾರ ಸಮಿತಿಯ ವಿವಿಧ ಸಮಿತಿ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here