Home ಧಾರ್ಮಿಕ ಸುದ್ದಿ ದುರ್ಗಾನಗರ : ನೂತನ ಗರ್ಭಗೃಹ ಸಮರ್ಪಣೆ, ಬ್ರಹ್ಮಕಲಶೋತ್ಸವ ಸಂಪನ್ನ

ದುರ್ಗಾನಗರ : ನೂತನ ಗರ್ಭಗೃಹ ಸಮರ್ಪಣೆ, ಬ್ರಹ್ಮಕಲಶೋತ್ಸವ ಸಂಪನ್ನ

1580
0
SHARE

ಕಟಪಾಡಿ: ಏಣಗುಡ್ಡೆ ದುರ್ಗಾನಗರದ ಶ್ರೀ ಚೌಡೇಶ್ವರೀ ದೇವಿ ಸಪರಿವಾರ ಸಾನ್ನಿಧ್ಯಗಳ ಸನ್ನಿಧಿಯಲ್ಲಿ ಜೂ. 17ರಿಂದ ಜೂ.19ರ ಪರ್ಯಂತ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೂತನ ಗರ್ಭಗುಡಿ ಸಮರ್ಪಣೆ, ಬಿಂಬ ಪುನಃಪ್ರತಿಷ್ಠೆ , ಬ್ರಹ್ಮಕಲಶೋತ್ಸವ ಚಂಡಿಕಾಯಾಗ ಸಂಪನ್ನಗೊಂಡಿತು.

ಆ ಪ್ರಯುಕ್ತ ಜೂ.18ರಂದು ಬೆಳಗ್ಗೆ 8ಕ್ಕೆ ಶ್ರೀ ಚೌಡೇಶ್ವರೀ ದೇವಿ , ಕಲ್ಕುಡ, ವರ್ತೆ, ಕಾಳಮ್ಮ, ಗುಳಿಗ ಪರಿವಾರ ಶಕ್ತಿಗಳ ಬಿಂಬ ಪುನಃಪ್ರತಿಷ್ಠೆ, ಸಾನ್ನಿಧ್ಯ ಕಲಶೋತ್ಸವ, 108 ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಶಾಂತಿ ಪ್ರಾಯಶ್ಚಿತ ಯಾಗಗಳು, ಪ್ರಸನ್ನ ಪೂಜೆ, ದೇವಿ ಸಂದರ್ಶನ ಸೇವೆ ನೆರವೇರಿದ್ದು, ದೇವಿಯ ಸಾನ್ನಿಧ್ಯ ವೃದ್ಧಿಗೋಸ್ಕರ ಜೂ.19ರಂದು ಚಂಡಿಕಾಯಾಗ, ಪೂರ್ಣಾಹುತಿ, ಶ್ರಿ ದೇವಿ ಸಂದರ್ಶನ ಜರಗಿತು. ಈ ಸಂದರ್ಭ ಆಡಳಿತ ಧರ್ಮದರ್ಶಿ ಸಚಿನ್‌ ಶೆಟ್ಟಿ, ಲತಾ ಶೆಟ್ಟಿ, ಜೋಯ್‌ ಕಟಪಾಡಿ ಮತ್ತಿತರರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here