Home ಧಾರ್ಮಿಕ ಕಾರ್ಯಕ್ರಮ ಬೆಳ್ಳಿಯ ಮುಖ ಮೂರ್ತಿ, ಹೊರೆಕಾಣಿಕೆ ಮೆರವಣಿಗೆ

ಬೆಳ್ಳಿಯ ಮುಖ ಮೂರ್ತಿ, ಹೊರೆಕಾಣಿಕೆ ಮೆರವಣಿಗೆ

ಬ್ರಹ್ಮಮುಗ್ಗೇರ್ಕಳ ದೈವಸ್ಥಾನ

816
0
SHARE

ಕಟಪಾಡಿ: ಮಟ್ಟು ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನ ಇದರ ಶಿಲಾಮಯ ಗರ್ಭಗುಡಿ ಸಮರ್ಪಣಾಪೂರ್ವಕ ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಪೂರ್ವಭಾವಿಯಾಗಿ ಮಟ್ಟು ಶ್ರೀ ಬ್ರಹ್ಮಸ್ಥಾನದಿಂದ ದೈವಗಳ ಬೆಳ್ಳಿ ಮುಖಮೂರ್ತಿ ಹಾಗೂ ಹೊರೆಕಾಣಿಕೆ ಮೆರವಣಿಗೆಯಲ್ಲಿ ಸನ್ನಿಧಾನಕ್ಕೆ ತರಲಾಯಿತು.

ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಯಾನಂದ ಬಂಗೇರ, ಪ್ರಧಾನ ಕಾರ್ಯದರ್ಶಿ ಯೋಗೀಶ್‌ ವಿ.ಎಸ್‌., ಕೋಶಾಧಿಕಾರಿ ಲೀಲಾಧರ ಕೋಟ್ಯಾನ್‌, ಉಪಾಧ್ಯಕ್ಷ ಬಲರಾಮ ರಾವ್‌, ಕರುಣಾಕರ ಶ್ರೀಯಾನ್‌, ಹರೀಶ್‌ ಸಾಲ್ಯಾನ್‌, ಸುರೇಶ್‌ ಪಿತ್ರೋಡಿ, ಕರೆಗುರಿಕಾರರಾದ ಚಂದ್ರಶೇಖರ್‌ ಕೋಟ್ಯಾನ್‌, ಲಕ್ಷ್ಮಣ ಅಂಚನ್‌, ರವಿ ಕೋಟ್ಯಾನ್‌, ಶಂಕರ್‌ ಮೆಂಡನ್‌, ಪ್ರಮುಖರಾದ ಮಹೇಶ್‌ ಅಂಚನ್‌, ಪ್ರಶಾಂತ್‌ ಜತ್ತನ್ನ, ಶಂಕರ್‌ ಶೆಟ್ಟಿಗಾರ್‌, ರಮೇಶ್‌ ಮೆಂಡನ್‌, ಸರಸು ಬಂಗೇರ, ಸುರೇಶ್‌ ಸಾಲ್ಯಾನ್‌, ದೈವಸ್ಥಾನದ ಗುರಿಕಾರ ನಾಗರಾಜ್‌, ಅರ್ಚಕ ದಿನೇಶ್‌, ಕಾರ್ಯದರ್ಶಿ ಗುರುರಾಜ್‌ ಜಿ.ಎಸ್‌., ಶ್ರೀ ಪಟ್ಟಾಭಿರಾಮ ಭಜನ ಮಂದಿರ, ರಾಮ ಭಕ್ತ ಭಜನ ಮಂದಿರ, ಶ್ರೀ ರಾಮ ಭಜನ ಮಂದಿರ, ಶ್ರೀ ನಾರಾಯಣಗುರು ಭಜನ ಮಂದಿರ, ನಿತ್ಯಾನಂದ ರಾಮ ಭಜನ ಮಂದಿರ, ಸತ್ಯಾನಂದ ಭಜನ ಮಂದಿರ ಸಹಿತ ವಿವಿಧ ಭಜನ ಮಂದಿರದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here